ಮಲ್ಲಿಕಾ ಶೆರಾವತ್‌ಗೆ ಒಂದೇ ಒಂದು ನಿಮಿಷಕ್ಕೆ ರು.4 ಲಕ್ಷ

By Rajendra

ಬಾಲಿವುಡ್ ಸೆಕ್ಸ್ ಬಾಂಬ್ ಎಂದೇ ಚಿರಪರಿಚಿತರಾಗಿರುವ ಮಲ್ಲಿಕಾ ಶೆರಾವತ್ ಒಂದೇ ಒಂದು ನಿಮಿಷಕ್ಕೆ ರು.4 ಲಕ್ಷ ಚಾರ್ಜ್ ಮಾಡುತ್ತಾರೆ ಎಂದರೆ ನಂಬಲು ಸಾಧ್ಯವೇ? ಹೌದು ನಂಬಲೇ ಬೇಕು. ಇದನ್ನು ಆಕೆ ಏನು ಕದ್ದುಮುಚ್ಚಿ ತೆಗೆದುಕೊಳ್ಳುತ್ತಿಲ್ಲ. ಓಪನ್ ಸೀಕ್ರೆಟ್ ಇದು.

2012ನೇ ವರ್ಷದ ಹೊಸ ವರ್ಷದಲ್ಲಿ ಕುಣಿಯಲಿಕ್ಕೆ ಮಲ್ಲಿಕಾ ಶೆರಾವತ್ ಒಂದು ನಿಮಿಷಕ್ಕೆ ರು.4 ಲಕ್ಷ ಚಾರ್ಜ್ ಮಾಡುತ್ತಿದ್ದಾರೆ. ಮುಂಬೈನ ಖಾಸಗಿ ಹೋಟೆಲ್ ಒಂದರಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಒಟ್ಟು ಅರ್ಧ ಗಂಟೆ ಕಾಲ ಹೊಸ ವರ್ಷದ ಹುರುಪಿನಲ್ಲಿರುವವರನ್ನು ಮಲ್ಲಿಕಾ ರಂಜಿಸಲಿದ್ದಾರೆ.

ಒಂದು ವೇಳೆ ಕಾರ್ಯಕ್ರಮ ಒಂಚೂರು ಜಾಸ್ತಿ ಸಮಯ ತೆಗೆದುಕೊಂಡರೂ ಪರ್ವಾಗಿಲ್ಲ ಎಂದು ಕಾರ್ಯಕ್ರಮ ನಿರ್ವಾಹಕರು ಅಭಯಹಸ್ತ ನೀಡಿದ್ದಾರೆ. ಒಂದು ವೇಳೆ ಮಲ್ಲಿಕಾ ಸ್ವಲ್ಪ ಜಾಸ್ತಿ ಹೊತ್ತು ಕುಣಿದರೂ ಆಕೆಯ ಪರ್ಸಿಗೇನು ಲಾಸಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಿನಿಮಾ ತಾರೆಗಳು ಸಂಭಾವನೆ ಸಿಕ್ಕಾಪಟ್ಟೆ ತುಟ್ಟಿಯಾಗಿದೆಯಂತೆ. (ಏಜೆನ್ಸೀಸ್)

More from Filmibeat

English summary
Mallika Sherawat will apparently be paid Rs. 4 lakh per minute for performing on 2011 New Year's Eve. Mallika Sherawat has been offered a whooping Rs. 4 lakh per minute to perform in a private hotel in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X