ಮಾರುಕಟ್ಟೆಗೆ ಕಿಂಗ್‌ಫಿಶರ್ ಕ್ಯಾಲೆಂಡರ್ 2011
ಕಿಂಗ್‌ಫಿಶರ್ ಕ್ಯಾಲೆಂಡರ್ ಎಂದರೆ ಎಂಥವರ ಕಣ್ಣುಗಳು ಅರಳುತ್ತವೆ. ಮನ ಮೋಹಕ ರೂಪದರ್ಶಿಯರು, ಹೊರಾಂಗಣ ದೃಶ್ಯಗಳು, ಮೈನವಿರೇಳಿಸುವ ಛಾಯಾಚಿತ್ರಗಳಿಗೆ ಹಾಗೂ ಈಜುಡುಗೆ ಸುಂದರಿಯರಿಗೆ ಈ ಕ್ಯಾಲೆಂಡರ್ ಹೆಸರುವಾಸಿ.
ಅಂತಾರಾಷ್ಟ್ರೀಯ ಗುಣಮಟ್ಟದ ಕಿಂಗ್ ಫಿಶರ್ ಕ್ಯಾಲೆಂಡರ್ ಕೇವಲ ಭಾರತದಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಆದರೆ ಈ ಕ್ಯಾಲೆಂಡರನ್ನು ತಿಥಿ, ವಾರ,ನಕ್ಷತ್ರ ಇತ್ಯಾದಿ ವಿವರಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ ಮನೆಯ ಗೋಡೆಯ ಅಲಂಕಾರವನ್ನು ಮತ್ತಷ್ಟು ವರ್ಣರಂಜಿತಗೊಳಿಸಲು ಬಳಲಾಗುತ್ತದೆ.
2011ನೇ ಸಾಲಿನ ಕಿಂಗ್‌ಫಿಶರ್ ಕ್ಯಾಲೆಂಡರ್ ಭಾನುವಾರ (ಡಿ.19) ಬಿಡುಗಡೆಯಾಯಿತು. ಈ ಬಾರಿಯ ಕ್ಯಾಲೆಂಡರನ್ನು ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಬಿಡುಗಡೆ ಮಾಡಿದರು. "ಕಿಂಗ್‌ಫಿಶರ್ ಕ್ಯಾಲೆಂಡರನ್ನು ನಾನು ಬಿಡುಗಡೆ ಮಾಡುತ್ತಿರುವುದು ಇದು ಎರಡನೇ ಬಾರಿ. ವಿಜಯ ಮಲ್ಯ ಅವರೆಂದರೆ ನನಗಿಷ್ಟ" ಎಂದಿದ್ದಾರೆ ಸಲ್ಲು.
"ಮಲ್ಯ ಅಸಾಮಾನ್ಯ ವ್ಯಕ್ತಿ. ಏನೇ ಕೆಲಸ ಕಾರ್ಯಗಳಿರಲಿ ಅವರು ಕರೆದಾಗಲೆಲ್ಲಾ ನಾನು ಓಡಿ ಬರುತ್ತೇನೆ" ಎಂದಿದ್ದಾರೆ ಸಲ್ಲು. ಅತುಲ್ ಕಸ್ಬೇಕರ್ ತಮ್ಮ ಕ್ಯಾಮೆರಾದಲ್ಲಿ ಈಜುಡುಗೆ ಸುಂದರಿಯ ಅಂದಚೆಂದಗಳನ್ನು ಸೆರೆಹಿಡಿದ್ದಾರೆ. ಮಾರಿಷಸ್‌ನ ರಮಣೀಯ ತಾಣಗಳಲ್ಲಿ ಕ್ಯಾಲೆಂಡರ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
ಚಿರತೆ, ಸಿಂಹ ಹಾಗೂ ಜೀಬ್ರಾ ಸೇರಿದಂತೆ ಮಾರಿಷಸ್‌ನ ಕಸೇಲಾ ನೇಚರ್ ಪಾರ್ಕ್‌ನ ಪ್ರಾಣಿಗಳೊಂದಿಗೆ ರೂಪದರ್ಶಿಗಳನ್ನು ಸೆರೆಹಿಡಿದಿದ್ದೇವೆ. ಚಾಮರೆಲ್ ಎಂಬ ಜ್ವಾಲಾಮುಖಿ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಯಾರನ್ನೂ ಅನುಮತಿಸುವುದಿಲ್ಲ. ಅಂತಹ ಕಡೆ ನಾವು ಚಿತ್ರೀಕರಣ ನಡೆಸಿದ್ದೇವೆ ಎಂದು ಛಾಯಾಗ್ರಾಹಕ ಅತುಲ್ ಕಸ್ಬೇಕರ್ ವಿವರ ನೀಡಿದ್ದಾರೆ.
ಆರು ಖ್ಯಾತ ಈಜುಡುಗೆ ರೂಪದರ್ಶಿಯರು ಈ ಬಾರಿಯ ಕ್ಯಾಲೆಂಡರ್‌ನಲ್ಲಿ ತಮ್ಮ ಮೈಮಾಟವನ್ನು ತೆರೆದಿಟ್ಟಿದ್ದಾರೆ. ಒಬ್ಬರಿಗಿಂತ ಒಬ್ಬರು ಸ್ಪರ್ಧೆಗೆ ಬಿದ್ದಂತೆ ಎಲ್ಲರೂ ಅದ್ಭುತವಾಗಿ ಕಾಣಿಸಿದ್ದಾರೆ. ಅದರಲ್ಲೂ ಏಂಜಲಾ ಜಾನ್ಸನ್ ಅವರ ಮೈಮಾಟವಂತೂ ವರ್ಣಿಸುವುದು ಅಸಾಧ್ಯ ಎಂದಿದ್ದಾರೆ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಲೀಕ ಸಿದ್ಧಾರ್ಥ್ ಮಲ್ಯ.


Click it and Unblock the Notifications











