ವಿದ್ಯಾ ಬಾಲನ್ ಗೆ ತಂದೆ-ತಾಯಿಗಳಿಂದಲೇ ಬೆದರಿಕೆ
ನಟಿ ವಿದ್ಯಾ ಬಾಲನ್ ಅವರಿಗೆ ಬೆದರಿಕೆ ಕರೆಗಳು ಬರಲು ಪ್ರಾರಂಭವಾಗಿವೆ. ಕಾರಣ ಆಕೆಯ ಕೆಲಸ. ಆದರೆ ಆ ಕರೆಗಳು ಬರುತ್ತಿರುವುದು ಆಕೆಯ ಮನೆಯವರಿಂದಲೇ ಎಂಬುದು ಆಶ್ಚರ್ಯವಾದರೂ ಸತ್ಯ. ವಿದ್ಯಾ ಬಾಲನ್ 'ದಿ ಡರ್ಟಿ ಪಿಕ್ಚರ್' ನಂತರ ಅದೆಷ್ಟು ಬ್ಯುಸಿಯಾಗಿದ್ದಾಳೆ ಎಂದರೆ ಮನೆಯವರ ಕೈಗೇ ಸಿಗುತ್ತಿಲ್ಲ.
ಮನೆಯವರಿಗೆ, ಮೊದಲೆಲ್ಲಾ ವಿದ್ಯಾರ ಜೊತೆ ಕಳೆಯಲು ಸಾಕಷ್ಟು ವೇಳೆ ದೊರಕುತ್ತಿತ್ತು. ಆದರೆ ಈಗ ಸ್ವತಃ ಅಪ್ಪ-ಅಮ್ಮ ಕೂಡ ಫೋನಿನಲ್ಲೇ ಮಾತನಾಡಬೇಕಾಗಿದೆ. ಅಷ್ಟು ಬ್ಯುಸಿಯಾಗಿದ್ದಾರೆ ನಟಿ ವಿದ್ಯಾ ಬಾಲನ್. ಕಹಾನಿ ಚಿತ್ರ ಕೂಡ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಬಹಳಷ್ಟು ಮೆಚ್ಚುಗೆ ಗಳಿಸಿದ್ದು ವಿದ್ಯಾರ ಅಭಿನಯಕ್ಕಂತೂ ಜನ ಮಾರುಹೋಗಿದ್ದಾರೆ.
ಇದೀಗ ವಿದ್ಯಾ ಚಿತ್ರದ ಪ್ರಮೋಶನ್, ಹೊಸ ಚಿತ್ರ, ಅದೂ ಇದು ಎಂದು ಮುಂಬೈನಲ್ಲೇ ಓಡಾಡಿಕೊಂಡಿದ್ದಾಳೆ. ಕೈಗೇ ಸಿಗದ ವಿದ್ಯಾಳಿಗೆ ಮನೆಯವರು ಹಿತವಚನ ಹೇಳುತ್ತಿದ್ದಾರೆ. ಕೆಲಸ ಕಡಿಮೆ ಮಾಡು, ಸ್ವಲ್ಪ ವಿಶ್ರಾಂತಿಯ ಕಡೆ ಗಮನ ಕೊಡು ಎಂದಿದ್ದಾರೆ. ಆದರೆ ಸದ್ಯದ ಆಕೆಯ ಕಮಿಟ್ ಮೆಂಟ್ ಹೇಗಿದೆ ಎಂದರೆ ಅದನ್ನು ಕಿವಿಯಲ್ಲಿ ಕೇಳಿಸಿಕೊಳ್ಳುವುದಕ್ಕೂ ಸಮಯವಿಲ್ಲ ಎಂಬಂತಾಗಿದೆ.
ಅದಕ್ಕೇ ಮನೆಯವರು ಕಂಡುಕೊಂಡ ದಾರಿ ಹೆದರಿಸಿ ವಿದ್ಯಾ ರೆಸ್ಟ್ ತೆಗೆದುಕೊಳ್ಳುವಂತೆ ಮಾಡುವುದು. ಅದು ಸದ್ಯ ಮನೆಯವರು ಆಕೆಯ ಹಿತಕ್ಕೆ ಕಂಡುಕೊಂಡ ದಾರಿ. ಮನೆಯವರ ಆಪ್ತಬೆದರಿಕೆಗೆ ಮಣಿದು ವಿದ್ಯಾ ಸ್ವಲ್ಪ ವಿಶ್ರಾಂತಿ ಮಾಡುತ್ತಾರಾ ಅಥವಾ ಈಗ ಇರುವಂತೆ 24X7 ಕೆಲಸದಲ್ಲಿ ಮುಂದುವರಿಯುತ್ತಾರಾ ಎಂಬುದು ಸದ್ಯದಲ್ಲೇ ತಿಳಿಯಲಿದೆ. (ಏಜೆನ್ಸೀಸ್)


Click it and Unblock the Notifications











