For Quick Alerts
  ALLOW NOTIFICATIONS  
  For Daily Alerts

  20 ವರ್ಷದ ಹಿಂದೆ ಪತ್ನಿ ಜೊತೆ ಹೋಳಿ ಆಡಿರುವ ಶಾರುಖ್ ಖಾನ್ ವಿಡಿಯೋ ವೈರಲ್

  |

  ಬಣ್ಣಗಳ ಹಬ್ಬ ಹೋಳಿಯನ್ನು ಭಾರತ ಸಂಭ್ರಮದಿಂದ ಆಚರಣೆ ಮಾಡಿದೆ. ಅದರಲ್ಲೂ ಸೆಲೆಬ್ರಿಟಿಗಳ ಹೋಳಿ ಆಚರಣೆ ಮತ್ತಷ್ಟು ಅದ್ದೂರಿಯಾಗಿತ್ತು. ಈ ವರ್ಷ ಬಾಲಿವುಡ್ ನ ಸಾಕಷ್ಟು ಕಲಾವಿದರು ಹೋಳಿ ಆಡಿ ಕುಣಿದು ಕುಪ್ಪಳಿಸಿದ್ದಾರೆ. ಆದರೆ ನಟ ಶಾರುಖ್ ಖಾನ್ ಈ ಬಾರಿ ಹೋಳಿ ಆಡಿರುವ ಬಗ್ಗೆ ಎಲ್ಲಿಯೂ ವರದಿ ಆಗಿಲ್ಲ.

  ಒಂದು ಫೋಟೋಗೆ ಸ್ಟಾರ್ ನಟರ ಸಂಭಾವನೆ ಎಷ್ಟು? | Priyanka Chopra | Instagram | Filmibeat Kannada

  ಆದರೆ ಶಾರುಖ್ ಮತ್ತು ಪತ್ನಿ ಗೌರಿ ಖಾನ್ ಇಬ್ಬರು ಹೋಳಿ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ಹಾಗೆ ಇದು ಈ ವರ್ಷದ ಹೋಳಿ ಆಚರಣೆ ಅಲ್ಲ. ಬರೋಬ್ಬರಿ 20 ವರ್ಷದ ಹಳೆಯ ವಿಡಿಯೋ. ಅಂದರೆ 2000ನೇ ಇಸವಿಯಲ್ಲಿ ಆಡಿದ ಹೋಳಿ ಸಂಭ್ರಮದ ವಿಡಿಯೋ.

  ನಟ ಶಾರುಖ್ ಗೆ ED ಶಾಕ್..ರೋಸ್ ವ್ಯಾಲಿ ಗ್ರೂಪ್ ಗೆ ಸೇರಿದ 70.11 ಕೋಟಿ ಮೌಲ್ಯದ ಆಸ್ತಿ ವಶನಟ ಶಾರುಖ್ ಗೆ ED ಶಾಕ್..ರೋಸ್ ವ್ಯಾಲಿ ಗ್ರೂಪ್ ಗೆ ಸೇರಿದ 70.11 ಕೋಟಿ ಮೌಲ್ಯದ ಆಸ್ತಿ ವಶ

  ಈ ವಿಡಿಯೋವನ್ನು ಸುಭಾಷ್ ಘಾಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಾರುಖ್ ಮತ್ತು ಪತ್ನಿ ಗೌರಿ ಬಣ್ಣದೋಕುಳಿಯಲ್ಲಿ ಮಿಂದೆದ್ದಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಬಣ್ಣದ ನೀರು, ಶಾರುಖ್ ದಂಪತಿಯ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಅಂದ್ಹಾಗೆ ಶಾರುಖ್ ದಂಪತಿಯ ಜೊತೆ ಬಾಲಿವುಡ್ ನಟಿ ಚಂಕಿ ಪಾಂಡೆ ಕೂಡ ಇದ್ದಾರೆ. ಇನ್ನು ಶಾರುಖ್ ಈ ಬಾರಿ ಹೇಳಿ ಆಡದಿದ್ದರು, ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯತಿಳಿಸಿದ್ದಾರೆ. ಶಾರುಖ್ ಸದ್ಯ ಯಾವುದೆ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.

  ಕೊನೆಯದಾಗಿ ಝೀರೋ ಸಿನಿಮಾದಲ್ಲಿ ಮಿಂಚಿದ್ದರು. ಝೀರೋ ಸಿನಿಮಾ ಸೋತ ಬಳಿಕ ಶಾರುಖ್ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಶಾರುಖ್ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಆದರೆ ಯಾವುದೆ ಸಿನಿಮಾವು ಇದುವರೆಗೂ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ.

  English summary
  20 Years old video of Shah Rukh Khan and wife Gauri Khan holi celebration video viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X