For Quick Alerts
  ALLOW NOTIFICATIONS  
  For Daily Alerts

  ಜಾಕ್ವೆಲಿನ್ ಫರ್ನಾಂಡೀಸ್ ಆಪ್ತೆಯ ವಿಚಾರಣೆ: ನಟಿಗೆ ಹೆಚ್ಚಿದ ಸಂಕಷ್ಟ

  |

  200 ಕೋಟಿ ರು. ಹಣ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಆರೋಪಿಯಾಗಿದ್ದು, ಸತತ ವಿಚಾರಣೆಗಳನ್ನು ಎದುರಿಸುತ್ತಿದ್ದಾರೆ.

  ವಂಚಕ ಸುಕೇಶ್‌ ಚಂದ್ರಶೇಖರ್ ಜೊತೆ ಆಪ್ತ ಸಂಬಂಧ ಹೊಂದಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇಡಿ) ಆರೋಪಿಯೆಂದು ಚಾರ್ಜ್ ಶೀಟ್ ಸಲ್ಲಿಸಿದೆ. ಇದೀಗ ದೆಹಲಿ ಪೊಲೀಸ್ ಇಲಾಖೆಯ ಹಣಕಾಸು ಅಪರಾಧ ವಿಭಾಗವು ಸತತವಾಗಿ ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ತನಿಖೆ ನಡೆಸುತ್ತಿದ್ದು, ನಟಿಯ ಆಪ್ತರನ್ನೂ ಸಹ ವಿಚಾರಣೆಗೆ ಒಳಪಡಿಸಿದೆ.

  ಹಣಕ್ಕಾಗಿಯೇ ವಂಚಕ ಸುಕೇಶ್‌ ಜೊತೆ ಸಂಬಂಧ! ಜಾಕ್ವೆಲಿನ್‌ ವಿರುದ್ಧ ಇಡಿ ಸಾಕ್ಷ್ಯ ಸಹಿತ ಆರೋಪಹಣಕ್ಕಾಗಿಯೇ ವಂಚಕ ಸುಕೇಶ್‌ ಜೊತೆ ಸಂಬಂಧ! ಜಾಕ್ವೆಲಿನ್‌ ವಿರುದ್ಧ ಇಡಿ ಸಾಕ್ಷ್ಯ ಸಹಿತ ಆರೋಪ

  ಸುಕೇಶ್ ಚಂದ್ರಶೇಖರ್ ಅನ್ನು ಜಾಕ್ವೆಲಿನ್‌ಗೆ ಪರಿಚಿಸಿದ್ದ ಪಿಂಕಿ ಇರಾನಿಯನ್ನು ಈಗಾಗಲೇ ವಿಚಾರಣೆ ನಡೆಸಿದರುವ ದೆಹಲಿ ಪೊಲೀಸರು, ಇದೀಗ ಜಾಕ್ವೆಲಿನ್‌ನ ಸ್ಟೈಲಿಸ್ಟ್ ಲೀಪಾಕ್ಷಿ ಎಲ್ಲವಾಡಿ ಎಂಬುವರನ್ನು ವಿಚಾರಣೆಗೆ ಮಾಡಿದೆ.

  ಜಾಕ್ವೆಲಿನ್‌ಗೆ ಯಾವ ಬಟ್ಟೆ ಇಷ್ಟ, ಆಕೆ ಧರಿಸುವ ಬ್ರ್ಯಾಂಡ್, ಸ್ಟೈಲ್ ಇನ್ನಿತರೆ ಮಾಹಿತಿಗಳನ್ನು ಸುಕೇಶ್, ಲೀಪಾಕ್ಷಿ ಎಲ್ಲವಾಡಿಯಿಂದ ಪಡೆಯುತ್ತಿದ್ದನಂತೆ. ಹಾಗಾಗಿ ದೆಹಲಿ ಪೊಲೀಸರು ಲೀಪಾಕ್ಷಿ ಎಲ್ಲವಾಡಿಯನ್ನು ವಿಚಾರಣೆ ಮಾಡಿದ್ದಾರೆ.

  ಸುಕೇಶ್ ಹಾಗೂ ಜಾಕ್ವೆಲಿನ್‌ರ ಸಂಬಂಧದ ಬಗ್ಗೆ ತನಗೆ ಗೊತ್ತಿತ್ತು ಎಂದು ಪೊಲೀಸರ ಬಳಿ ಹೇಳಿರುವ ಲೀಪಾಕ್ಷಿ, ಸುಕೇಶ್ ಹಾಗೂ ಜಾಕ್ವೆಲಿನ್ ಎಷ್ಟು ತಿಂಗಳಿನಿಂದ ಆಪ್ತವಾಗಿದ್ದಾರೆ, ಯಾವಾಗ ಭೇಟಿ ಮಾಡಿದ್ದರು, ಸ್ಥಳದ ಮಾಹಿತಿ ಇನ್ನಿತರೆ ಸೂಕ್ಷ್ಮ ಮಾಹಿತಿಗಳನ್ನು ಪೊಲೀಸರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.

  ಈಗಾಗಲೇ ಪಿಂಕಿ ಇರಾನಿ, ಜಾಕ್ವೆಲಿನ್ ಹಾಗೂ ಸುಕೇಶ್ ನಡುವಿನ ಆಪ್ತತೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಾಕ್ವೆಲಿನ್ ಅನ್ನು ಸಹ ಐದು ದಿನದಲ್ಲಿ ಎರಡು ಬಾರಿ ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೀಗ ಜಾಕ್ವೆಲಿನ್‌ರ ಸ್ಟೈಲಿಸ್ಟ್‌ ವಿಚಾರಣೆಯೂ ಆಗಿದೆ. ಜಾಕ್ವೆಲಿನ್‌ರ ಸಹೋದರನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

  ಸುಕೇಶ್ ಚಂದ್ರಶೇಖರ್ ಕುಖ್ಯಾತ ವಂಚಕನಾಗಿದ್ದು, ತಮಿಳಿನ ಜನಪ್ರಿಯ ರಾಜಕಾರಣಿಯೊಬ್ಬರನ್ನು ವಂಚಿಸಿದ ಕಾರಣಕ್ಕೆ ಕೆಲ ವರ್ಷಗಳಿಂದಲೂ ತಿಹಾರ್ ಜೈಲಿನಲ್ಲಿದ್ದಾನೆ. ಅಲ್ಲಿದ್ದುಕೊಂಡೆ ತನ್ನ ಕಸುಬು ಮುಂದುವರೆಸಿದ್ದ ಸುಕೇಶ್, ರ್ಯಾನ್‌ಬಾಕ್ಸಿ ಸಂಸ್ಥೆಯ ಮಾಜಿ ಮಾಲೀಕ ಶಿವೇಂಧರ್ ಸಿಂಗ್‌ನ ಪತ್ನಿ ಅದಿತಿ ಸಿಂಗ್ ಇಂದ 200 ಕೋಟಿ ವಸೂಲಿ ಮಾಡಿದ್ದ.

  ಸುಕೇಶ್‌ ಚಂದ್ರಶೇಖರ್‌ ಒಬ್ಬ ವಂಚಕ ಎಂದೂ ಅಪರಾಧ ಕೃತ್ಯಗಳಿಂದ ಹಣ ಗಳಿಸುತ್ತಿದ್ದಾನೆ ಎಂದು ಗೊತ್ತಿದ್ದರೂ ಜಾಕ್ವೆಲಿನ್ ಆತನೊಟ್ಟಿಗೆ ಸಂಪರ್ಕ ಇಟ್ಟುಕೊಂಡಿದ್ದರು. ಆತನಿಂದ ದುಬಾರಿ ಬೆಲೆಯ ಉಡುಗೊರೆಗಳನ್ನು ಪಡೆದುಕೊಂಡಿದ್ದರು. ಆತನಿಂದ ಹಣ ಪಡೆದುಕೊಂಡಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಆರೋಪಿಸಿದೆ. ದೆಹಲಿ ಪೊಲೀಸರು ಸಹ ಇದೇ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

  ಸುಕೇಶ್, ಜಾಕ್ವೆಲಿನ್ ಫರ್ನಾಂಡೀಸ್ ಮಾತ್ರವೇ ಅಲ್ಲದೆ ನಟಿ ನೋರಾ ಫತೇಹಿ, ನಟಿ ನಿಕ್ಕಿ ತಾಂಬೋಲಿ, ಆರುಷಿ ಖನ್ನಾ ಹಾಗೂ ಇನ್ನೂ ಕೆಲವು ಮಾಡೆಲ್‌ಗಳಿಗೆ ಉಡುಗೊರೆಗಳನ್ನು ನೀಡಿದ್ದ. ಇವರಿಗೂ ದೆಹಲಿ ಪೊಲೀಸರು ಸಮನ್ಸ್ ನೀಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

  English summary
  200 crore rs extortion case of conman Sukesh Chandrashekhar: Jacqueline Fernandez stylist inquired by Delhi police.
  Friday, September 23, 2022, 11:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X