»   » 2013: ಮೊದಲರ್ಧ : ಹಿಟ್, ಫ್ಲಾಪ್ ಪಟ್ಟಿ

2013: ಮೊದಲರ್ಧ : ಹಿಟ್, ಫ್ಲಾಪ್ ಪಟ್ಟಿ

Posted By:
Subscribe to Filmibeat Kannada

2013 ಮೊದಲರ್ಧ ಮುಗಿದಿದ್ದು, ಮುಂಗಾರು ಸಮಯದಲ್ಲಿ ಕಿಚ್ಚು ಹಚ್ಚಲು ಭರ್ಜರಿ ಚಿತ್ರಗಳು ಸಾಲು ಸಾಲಾಗಿ ಕಾದು ನಿಂತಿವೆ. ಬಾಲಿವುಡ್ ನಲ್ಲಿ ಯಶಸ್ಸಿನ ಅಲೆ ಈಗ ತೇಲಿ ತೇಲಿ ಬರುತ್ತಿದೆ.

ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರ ಮಿಲ್ಕಾ ಸಿಂಗ್ ಕುರಿತ ಚಿತ್ರಕಥೆ 'ಭಾಗ್ ಮಿಲ್ಕಾ ಭಾಗ್' ಶುಕ್ರವಾರ(ಜು.12) ತೆರೆ ಕಂಡಿದ್ದು ಭರ್ಜರಿ ಓಪನಿಂಗ್ ನೋಡಿದರೆ 2013ರ ದ್ವಿತೀಯಾರ್ಧದ ಮೊದಲ ಹಿಟ್ ಚಿತ್ರ ಎನಿಸುವ ಲಕ್ಷಣಗಳು ಕಾಣಿಸಿದೆ.

2013ರ ಮೊದಲರ್ಧದಲ್ಲಿ ಯೇ ಜವಾನಿ ಹೇ ದಿವಾನಿ, ಆಶೀಕಿ 2, ರೇಸ್ 2 ಸೇರಿದಂತೆ ಡಜನ್ ಗಟ್ಟಲೆ ಚಿತ್ರಗಳು ಬಾಕ್ಸಾಫೀಸ್ ಅಲ್ಲದೆ ಜನಮನ್ನಣೆ ಗಳಿಸಿವೆ. ಜಾಲಿ ಎಲ್ ಎಲ್ ಬಿ, ಸ್ಪೆಷಲ್ 26 ನಂಥ ವಿಭಿನ್ನ ಕಥಾನಕಗಳನ್ನು ಜನ ಗೆಲ್ಲಿಸಿದ್ದಾರೆ. ಇಷ್ಟೇ ಪ್ರಮಾಣ ಚಿತ್ರಗಳು ನೆಲಕಚ್ಚಿರುವುದನ್ನು ಕಾಣಬಹುದು. 2013ರ ಮೊದಲರ್ಧದ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಬಾಲಿವುಡ್ ಚಿತ್ರಗಳ ಝಲಕ್ ಇಲ್ಲಿದೆ

ಯೇ ಜವಾನಿ ಹೇ ದೀವಾನಿ

ಬಾಕ್ಸಾಫೀಸ್ ನಲ್ಲಿ 100 ಕೋಟಿ ರು ಗಳಿಕೆ ಕ್ಲಬ್ ಸೇರಿರುವ 'ಯೇ ಜವಾನಿ ಹೇ ದೀವಾನಿ' ಹದಿಹರೆಯದ ಹುಚ್ಚುಕೋಡಿ ಮನಸ್ಸುಗಳಿಗೆ ಹೇಳಿ ಮಾಡಿಸಿದಂಥ ಚಿತ್ರ.

ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಆದಿತ್ಯಾ ರಾಯ್ ಕಪೂರ್, ಕಲ್ಕಿ ಕೋಚ್ಲಿನ್ ವಿಭಿನ್ನ ರೀತಿಯಲ್ಲಿ ಜೀವನವನ್ನು ನೋಡುತ್ತಾ ಕೊನೆಗೆ ತಮ್ಮದೇ ಜಾಲದಲ್ಲಿ ಒಂದಾಗುವ ಕಥೆ ಹೊಸ ಬಗೆಯಲ್ಲಿ ನೀಡಿದ್ದಾರೆ ಅಯಾನ್ ಮುಖರ್ಜಿ. ಚಿತ್ರದ ವಿಮರ್ಶೆ ಓದಿ

ಆಶೀಕಿ 2

ಮೋಹಿತ್ ಸೂರಿ ನಿರ್ದೇಶನದ ಆಶೀಕಿ 2 ಚಿತ್ರ ಮ್ಯೂಸಿಕಲ್ ಪ್ರೇಮ್ ಕಹಾನಿಯಾಗಿದ್ದು ದುರಂತ ಅಂತ್ಯದ ನಡುವೆಯೂ ಪ್ರೇಕ್ಷಕರಿಗೆ ಸಕತ್ ಇಷ್ಟವಾಗಿದೆ. ಕ್ಯೂಂ ಕಿ ತುಮ್ ಹಿ ಹೋ ಹಾಡು ಹುಚ್ಚೆಬ್ಬಿಸಿದೆ.

ಆದಿತ್ಯ ರಾಯ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಅವರು ಈ ಚಿತ್ರದ ಮೂಲಕ ಸ್ಟಾರ್ ಗಳಾಗಿ ಬಿಟ್ಟಿದ್ದಾರೆ. ಯಶಸ್ವಿ ಗಾಯಕ ನಾಗಿದ್ದ ನಾಯಕ ತನ್ನ ಹಾಡುಗಾರಿಕೆ ಅವಸಾನ ಸ್ಥಿತಿ ತಲುಪಿದಾಗ ಕಂಡ ಬಡ ಹುಡುಗಿಯನ್ನು ರಾಕ್ ಸ್ಟಾರ್ ಮಾಡುವ ಕಥೆ ಇದಾಗಿದೆ. ಆಕೆ ಯಶಸ್ಸಿನಲ್ಲಿ ತನ್ನ ಸುಖ ಕಾಣುತ್ತಾ, ಆಕೆ ಯಶಸ್ಸು ಹಾಳಾಗಬಾರದು ಎಂಬ ಉದ್ದೇಶಕ್ಕೆ ತನ್ನ ಜೀವನ ಅಂತ್ಯಗೊಳಿಸಿಕೊಳ್ಳುತ್ತಾನೆ.

ರೇಸ್ 2

ಡ್ಯಾನ್ಸಿಂಗ್, ಡ್ರಿಕಿಂಗ್, ಗ್ಲಾಂಬ್ಲಿಗ್ ಹಾಗೂ ಕುತಂತ್ರಗಳ ತವರಾದ ರೇಸ್ 2 ಚಿತ್ರ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಸ್ಕೀನ್ ಶೋ ನಿಂದಲೂ ಪಡ್ಡೆಗಳಿಗೆ ಹಿತ ಎನಿಸಿತು. ಸೈಫ್ ಅಲಿ ಖಾನ್ ನಟನೆ ಬಿಟ್ಟರೆ ಕಥೆ ಹುಡುಕಾಟದಲ್ಲಿದ್ದ ಪ್ರೇಕ್ಷಕನಿಗೆ ಮನರಂಜನೆ ಕೊಟ್ಟಿದ್ದು ಯಾವ ಅಂಶ ಎಂಬುದೇ ಗೊತ್ತಾಗುವುದಿಲ್ಲ.

ರಾಂಝಾನಾ

ಆನಂದ್ ರೈ ನಿರ್ದೇಶನದ ಧನುಷ್ ಅಭಿನಯದ ಚೊಚ್ಚಲ ಚಿತ್ರ ವಾರಣಸಿ ಮೂಲದ ಕಥೆ ಹೊಂದಿದ್ದು, ಸೋನಮ್ ಕಪೂರ್ ಹಾಗೂ ಅಭಯ್ ಡಿಯೋಲ್ ರನ್ನು ಹೊಂದಿದೆ. ಎಆರ್ ರೆಹಮಾನ್ ಸಂಗೀತ ದಿಲ್ ಸೆ, ತಾಳ್ ದಿನಗಳನ್ನು ನೆನಪಿಸುತ್ತದೆ.

ಧನುಷ್, ಸೋನಮ್ ಅಭಿನಯ, ಹುಚ್ಚು ಪ್ರೇಮ, ಭಗ್ನ ಪ್ರೇಮಿ ಅಳಲು, ರಾಜಕೀಯ, ಜಟಾಪಟಿ ಎಲ್ಲವೂ ಸಹ್ಯವಾಗಿದ್ದು ಚಿತ್ರ ಜನ ಮೆಚ್ಚುಗೆ ಗಳಿಸಿದೆ. ಚಿತ್ರದ ವಿಮರ್ಶೆ ಓದಿ

ಜಾಲಿ ಎಲ್ ಎಲ್ ಬಿ

ಸುಭಾಷ್ ಕಪೂರ್ ಅವರ ಚಿತ್ರ ಅಚ್ಚರಿಯ ಹಿಟ್ ಆಗಿದೆ. ಚಿತ್ರದಲ್ಲಿ ಕಾನೂನು ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುತ್ತದೆ. ಕೊನೆಗೆ ಜನ ಸಮಾನ್ಯರಿಗೂ ನ್ಯಾಯ ಪಡೆಯುವ ಕೇಳುವ ಹಕ್ಕು ಇದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಬೋಮನ್ ಇರಾನಿ ಹಾಗೂ ಅರ್ಶದ್ ವಾರ್ಸಿ ಮಾತಿನ ಪೈಪೋಟಿ, ವಾದ ವಿವಾದ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಹಿಟ್ ಅಂಡ್ ರನ್ ಕೇಸ್, ನಿರ್ಗತಿಕರು ನಗರದ ಫುಟ್ ಪಾತ್ ಮೇಲೆ ಜೀವನ ಶ್ರೀಮಂತರ ದರ್ಪ, ವಕೀಲ ಹುನ್ನಾರ, ಪೊಲೀಸರ ನಿರ್ಲಕ್ಷ, ನ್ಯಾಯಮೂರ್ತಿಗಳ ವೈಖರಿ ಎಲ್ಲವೂ ತೆರೆದಿಡಲಾಗಿದೆ.

ಸ್ಪೆಷಲ್ 26

ಅಕ್ಷಯ್ ಕುಮಾರ್ ಹಾಗೂ ಅನುಪಮ್ ಖೇರ್ ಗ್ಯಾಂಗ್ ವಂಚನೆ, ಚಿನ್ನಾಭರಣ ಮಳಿಗೆ ಲೂಟಿ ಮಾಡುವ ಈ ಕಥೆ ನಿಧಾನಗತಿಯಿಂದ ಪ್ರೇಕ್ಷಕರನ್ನು ಥ್ರಿಲ್ ಗೊಳಿಸುತ್ತದೆ. ಪೊಲೀಸ್ ಅಧಿಕಾರಿ ಮನೋಜ್ ಬಾಜಪೇಯಿ ಕೂಡಾ ಬೆಸ್ತು ಬೀಳು ದೃಶ್ಯ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ನೀರಜ್ ಪಾಂಡೆ ಸಮರ್ಥ ನಿರ್ದೇಶನ ಹಾಗೂ 15-20ಕ್ಕೂ ಅಧಿಕ ಪ್ರಮುಖ ನಟ ಅಭಿನಯ ಚಿತ್ರವನ್ನು ಸೈಲೆಂಟ್ ಹಿಟ್ ಮಾಡಿದೆ.

ABCD

ಡಾನ್ಸ್ ಶೋ ರಿಯಾಲಿಟಿ ಶೋ ಗೆಲುವು ಸೋಲು, ಕೆಳಮಟ್ಟದಿಂದ ಡ್ಯಾನ್ಸಿಂಗ್ ಸ್ಟಾರ್ ಆಗುವ ಕಥೆ ಇದಾಗಿದೆ. ಪ್ರಭುದೇವ ಪ್ರಮುಖ ಆಕರ್ಷಣೆ ಉಳಿದಂತೆ ಹೊಸಬರೆ ಈ ಚಿತ್ರದಲ್ಲಿದ್ದಾರೆ.

ಚಸ್ಮೆ ಬದ್ದೂರ್

ಸಿದ್ದಾರ್ಥ್ ತಾಪಸಿ ಸೇರಿದಂತೆ ಹೊಸಬರ ಈ ಚಿತ್ರ ಕಮಾಲ್ ಮಾಡಿತ್ತು

ಬಾಕ್ಸಾಫೀಸ್

2013ರ ಬಾಲಿವುಡ್ ಹಿಟ್ ಚಿತ್ರಗಳು furkey

ಬಾಕ್ಸಾಫೀಸ್

2013ರ ಬಾಲಿವುಡ್ ಹಿಟ್ ಚಿತ್ರಗಳು : go goa gon

ಬಾಕ್ಸಾಫೀಸ್

kai po che2013ರ ಬಾಲಿವುಡ್ ಹಿಟ್ ಚಿತ್ರಗಳು

ಬಾಕ್ಸಾಫೀಸ್

shoot out at wadaala2013ರ ಬಾಲಿವುಡ್ ಹಿಟ್ ಚಿತ್ರಗಳು

ಬಾಕ್ಸಾಫೀಸ್

saheb biwi aur gangster returns2013ರ ಬಾಲಿವುಡ್ ಹಿಟ್ ಚಿತ್ರಗಳು

ಔರಂಗಾಜೇಬ್

ಔರಂಗಾಜೇಬ್ : 2013ರ ಬಾಲಿವುಡ್ ಫ್ಲಾಪ್ ಚಿತ್ರ

ಬಾಂಬೆ ಟಾಕೀಸ್

ಹಲವು ಕಥೆಗಳನ್ನು ಒಳಗೊಂಡಿದ್ದ ಚಿತ್ರಕಥೆಯಲ್ಲಿ ವಿವಿಧ ನಿರ್ದೇಶಕರು ಕೈಯಾಡಿಸಿದ್ದರು

ಫ್ಲಾಪ್ ಚಿತ್ರ

David 2013ರ ಬಾಲಿವುಡ್ ಫ್ಲಾಪ್ ಚಿತ್ರ

ವಿಕ್ಕಿ ಡೊನರ್

ವಿಕ್ಕಿ ಡೊನರ್ 2013ರ ಬಾಲಿವುಡ್ ಹಿಟ್ ಚಿತ್ರಗಳು

ಫ್ಲಾಪ್ ಚಿತ್ರ

Ek Thi Daayan 2013ರ ಬಾಲಿವುಡ್ ಫ್ಲಾಪ್ ಚಿತ್ರ

ಹಿಮ್ಮತ್ ವಾಲ

ಹಿಮ್ಮತ್ ವಾಲ ಹಳೆ ಚಿತ್ರದ ರಿಮೇಕ್ ಗಣನೀಯವಾಗಿ ಸೋಲು ಕಂಡಿದೆ.

ಫ್ಲಾಪ್ ಚಿತ್ರ

ವಿದ್ಯಾ ಬಾಲನ್, ಇಮ್ರಾನ್ ಹಶ್ಮಿ ಅಭಿನಯದ ಚಿತ್ರ ತೋಪೆದ್ದಿದೆ

ಬಾಕ್ಸಾಫೀಸ್

Ishkq In Paris 2013ರ ಬಾಲಿವುಡ್ ಫ್ಲಾಪ್ ಚಿತ್ರಗಳು

ಫ್ಲಾಪ್ ಚಿತ್ರಗಳು

Matru Ki Bijlee Ka Mandola 2013ರ ಬಾಲಿವುಡ್ ಫ್ಲಾಪ್ ಚಿತ್ರ

ಫ್ಲಾಪ್ ಚಿತ್ರಗಳು

2013ರ ಬಾಲಿವುಡ್ ಫ್ಲಾಪ್ ಚಿತ್ರ : Rangrezz

ಫ್ಲಾಪ್ ಚಿತ್ರಗಳು

2013ರ ಬಾಲಿವುಡ್ ಫ್ಲಾಪ್ ಚಿತ್ರಗಳು : The Attacks Of 26/11

ಯಮ್ಲಾ ಪಗ್ಲಾ ದಿವಾನ

ಯಮ್ಲಾ ಪಗ್ಲಾ ದಿವಾನ : ಧರ್ಮೇಂದ್ರ, ಸನ್ನಿ ಡಿಯೋಲ್, ಬಾಬ್ಬಿ ಡೀಯೋಲ್ ಒಟ್ಟಿಗೆ ನಟಿಸಿದ ಇದು ಕಾಮಿಡಿ ಚಿತ್ರ

English summary
The first half of 2013 is over. It's monsoon time. And it's raining hits in Bollywood with film after film crossing the success barrier.
Please Wait while comments are loading...