Mathura Election Results 2024 ; ಮಥುರಾದಲ್ಲಿ ಶೋಲೆಯ ಬಸಂತಿ ಹೇಮಾ ಮಾಲಿನಿಗೆ ಮುನ್ನಡೆ..!

ಒಂದ್ಕಾಲದಲ್ಲಿ ತಮ್ಮ ಸೌಂದರ್ಯದಿಂದ ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದವರು ಹೇಮಾ ಮಾಲಿನಿ. ಹಿಂದಿ ಸಿನಿಮಾ ಕಂಡ ಸೂಪರ್ ಸ್ಟಾರ್ ನಾಯಕಿಯರಲ್ಲಿ ಇವರ ಹೆಸರು ಕಡ್ಡಾಯವಾಗಿ ಪ್ರಸ್ತಾಪವಾಗುತ್ತದೆ.

ತಮ್ಮ ಹೆಸರಿನಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಷ್ಟು ಜನಪ್ರಿಯತೆಯನ್ನ ಹೊಂದಿದ್ದ ಈ ಡ್ರೀಮ್ ಗರ್ಲ್ 1999ರಲ್ಲಿ ರಾಜಕೀಯಕ್ಕೆ ಧುಮುಕಿದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಬಾಲಿವುಡ್ ನಟ ವಿನೋದ್ ಖನ್ನಾ ಅವರ ಪರ ಪಂಜಾಬ್‌ನ ಗುರ್ದಾಸ್‌ಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಚಾರ ಮಾಡಿದ ಹೇಮಾ ಮಾಲಿನಿ, 2004ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. ಇದಕ್ಕೂ ಮುನ್ನ 2003ರಲ್ಲೇ ರಾಜ್ಯ ಸಭೆಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆ ಆಗಿದ್ದ ಹೇಮಾ ಮಾಲಿನಿ, 2011ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದರು

2024-election-update-latest-on-hema-malinis-leading-and-trailing-results

2011ರಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಏರಿದ ಹೇಮಾ ಮಾಲಿನಿ, 2014ರಲ್ಲಿ ಮೊಟ್ಟ ಮೊದಲ ಬಾರಿಗೆ ಮಥುರಾ ಲೋಕಸಭಾ ಕ್ಷೇತ್ರದ ಸಂಸದೆಯಾದರು. ಆರ್‌ಎಲ್‌ಡಿ ಪಕ್ಷದ ಅಭ್ಯರ್ಥಿ, ಅಂದಿನ ಸಂಸದ ಜಯಂತ್ ಚೌಧರಿ ಅವರನ್ನ 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಮಣಿಸಿ ಭರ್ಜರಿ ಗೆಲುವು ದಾಖಲಿಸಿದ ಹೇಮಾ ಮಾಲಿನಿ, 2019ರ ಲೋಕಸಭಾ ಚುನಾವಣೆಯಲ್ಲೂ ತಮ್ಮ ಗೆಲುವಿನ ಅಂತರವನ್ನ ಹೆಚ್ಚಿಸಿಕೊಂಡರು.

ಇದೀಗ 2024ರ ಲೋಕಸಭಾ ಚುನಾವಣೆಯಲ್ಲೂ ಮಥುರಾ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಿರುವ ಹೇಮಾ ಮಾಲಿನಿ, ಈ ಬಾರಿಯೂ ಕೂಡ ಮುನ್ನಡೆಯನ್ನ ಕಾಯ್ದುಕೊಂಡಿದ್ದಾರೆ. ತಮ್ಮ ಪ್ರಬಲ ಸ್ಫರ್ಧಿ ಸಮಾಜವಾದಿ ಪಾರ್ಟಿಯ ಸುರೇಶ್ ಸಿಂಗ್ ಅವರಿಂದ 106924 ಮತಗಳ ಅಂತರವನ್ನ ಕಾಪಾಡಿಕೊಂಡಿದ್ದಾರೆ.

More from Filmibeat

English summary
Bollywood Actress And Politician Hema Malini Leading and Trailing Results"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X