ಬಿಕಿನಿಗೆ ಶರಣೆಂದ ಮಲ್ಲು ಬೆಡಗಿ ಅಸಿನ್ ತೊಟ್ಟುಂಕಲ್
'ಗಜನಿ' ಚಿತ್ರದ ಮೂಲಕ ಬಾಲಿವುಡ್‌ಗೆ ಅಡಿಯಿಟ್ಟ ಅಸಿನ್‌ಗೆ ಈಗ ಅವಕಾಶಗಳು ಅಷ್ಟಕ್ಕಷ್ಟೆ. ಅಮೀರ್ ಖಾನ್ ಜತೆ ನಟಿಸಿದ ಬಳಿಕ 'ಲಂಡನ್ ಡ್ರೀಮ್ಸ್'ನಲ್ಲಿ ಕಾಣಿಸಿದ್ದರು. ಬಳಿಕ ಹೇಳಿಕೊಳ್ಳುವಂತಹ ಚಿತ್ರಗಳು ಅಸಿನ್ ಖಾತೆಗೆ ಜಮೆಯಾಗಲಿಲ್ಲ. ಸುಮ್ಮನೆ ಕೂರುವುದರಲ್ಲಿ ಪ್ರಯೋಜನವಿಲ್ಲ ಎಂದರಿತ ಮಲ್ಲು ಬೆಡಗಿ ಈಗ ಬಿಕಿನಿಗೆ ಶರಣೆಂದಿದ್ದಾರೆ.
ಸಜಿದ್ ನಡಿಯಾವಾಲಾ ಅವರ 'ಹೌಸ್‌ಫುಲ್ 2'ಚಿತ್ರದಲ್ಲಿ ಅಸಿನ್ ಈಜುಡುಗೆಯಲ್ಲಿ ಕಾಣಿಸಲಿದ್ದಾರೆ. 'ಧೂಮ್ 2' ಚಿತ್ರ ಐಶ್ವರ್ಯ ರೈಗೆ ಬ್ರೇಕ್ ಕೊಟ್ಟಂತೆ ಈ ಚಿತ್ರ ಅಸಿನ್‌ಗೆ ವೃತ್ತಿ ಜೀವನದಲ್ಲಿ ಪ್ರಮುಖ ಮೈಲುಗಲ್ಲಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷ ಎಂದರೆ, 'ಧೂಮ್ 2' ಚಿತ್ರದಲ್ಲಿ ಐಶೂಗೆ ವಸ್ತ್ರ ವಿನ್ಯಾಸ ಮಾಡಿದ್ದ ಅಕಿ ನರುಲಾ ಕೈಚಳಕ ಅಸಿನ್ ಚಿತ್ರದಲ್ಲೂ ಇರುತ್ತಂತೆ.
"ಚಿತ್ರಕತೆ ಆ ರೀತಿಯ ಉಡುಗೆಯನ್ನು ಬಯಸುತ್ತದೆ. ಹಾಗಾಗಿ ಅಸಿನ್ ಕೂಡ ಒಪ್ಪಿದ್ದಾರೆ. ಚಿತ್ರೀಕರಣ ಇಟಲಿ, ಗ್ರೀಕ್‌ನಲ್ಲಿ ನಡೆಯಲಿದೆ ಎಂದಿದ್ದಾರೆ ನಿರ್ಮಾಪಕ ಸಜಿದ್ ನಡಿಯಾವಾಲ. ಒಟ್ಟಿನಲ್ಲಿ ಹೊಸ ಲುಕ್‍ನಲ್ಲಿ ಅಸಿನ್ ದರ್ಶನ ನೀಡಲಿದ್ದು, ಪ್ರೇಕ್ಷಕರ ಕಣ್ಣಿಗೆ ರಸದೌತಣ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.


Click it and Unblock the Notifications











