ಪ್ರೇಮ ಪಾಠದ ಟೀಚರ್ ಆದ ಸೆಲಿನಾ ಜೇಟ್ಲಿಗೆ ಜೈ

ಬಾಲಿವುಡ್ ನಲ್ಲಿ ಅಷ್ಟೇನೂ ಚಾರ್ಮ್ ಗಳಿಸಿಕೊಳ್ಳದ ಆದರೆ ತನ್ನದೇ ಆದ ಸುರಕ್ಷಿತ ಸ್ಥಾನ ಹೊಂದಿರುವ ನಟಿ ಸೆಲಿನಾ ಜೇಟ್ಲಿ. 2001 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಗೆದ್ದ ಈಕೆ, ಆಗ ಪಡೆದ ಟೈಟಲ್ " ಫೆಮಿನಾ ಮಿಸ್ ಇಂಡಿಯಾ ಯುನಿವರ್ಸ್ 2011". ನಂತರ ಬ್ಯೂಟಿಫುಲ್ ಸ್ಕಿನ್, MTV ಮೋಸ್ಟ್ ವಾಂಟೆಡ್ ಪ್ರಶಸ್ತಿ ಹೀಗೆ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

2003 ರಲ್ಲಿ ಫಿರೋಜ್ ಖಾನ್ ಅವರ 'ಜನಶೀನ್' ಚಿತ್ರದ ಮೂಲಕ ಬಾಲಿವುಡ್ ಬಾಗಿಲು ತಟ್ಟಿದ ಸೆಲಿನಾ, ಇಲ್ಲಿಯವರೆಗೆ ಬಂದ ಅವಕಾಶಗಳನ್ನು ಬಳಸಿಕೊಂಡು ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೂ ಬಾಲಿವುಡ್ ನಲ್ಲಿ ಆರಕ್ಕೇರದ ಮೂರಕ್ಕಿಳಿಯದ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಆದರೆ ಅಪ್ಪಟ ಪ್ರತಿಭೆ ಜೊತೆ ಪ್ರಬುದ್ಧವಾಗಿ ಮಾತನಾಡುವ ಕಲೆ ಇವರಿಗೆ ಸಿದ್ಧಿಸಿದೆ.

ಇಂಥ ಸೆಲಿನಾ, ಪ್ರೀತಿ ಪ್ರೇಮದ ಕಥಾಹಂದರ ಹೊಂದಿರುವ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ವೃತ್ತಿಜೀವನದ ಅನುಭವದ ಆಧಾರದ ಮೇಲೆ ಪ್ರೀತಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. "ಪ್ರೀತಿ ಎಂಬುದು ಕುರುಡಲ್ಲ. ಇದು ತನಗೆ ಬೇಕಾಗಿದ್ದನ್ನಷ್ಟೇ ನೋಡುವ ದೃಷ್ಟಿಕೋನ" ಎಂಬುದು ಸೆಲಿನಾ ಹೇಳಿಕೆ. ನಿಜವಾಗಿಯೂ ಪ್ರಬುದ್ಧ ಮಾತು ಎನ್ನಬಹುದು, ನೀವೇನಂತೀರಾ....! (ಏಜೆನ್ಸೀಸ್)

More from Filmibeat

English summary
Bollywood actress Celina Jaitley spoke about Love. She told that love is not blind, it is the selfishness.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X