For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ ಅಪೂರ್ವ ದೇಹಸಿರಿ ಅನಾವರಣ!

  By Rajendra
  |

  ಅಭಿಷೇಕ್ ಬಚ್ಚನ್ ಮುದ್ದಿನ ಮಡದಿ ಐಶ್ವರ್ಯ ರೈ ಇದೇ ಮೊದಲ ಬಾರಿಗೆ ತಮ್ಮ ಅಪೂರ್ವ ದೇಹಸಿರಿಯನ್ನು ಪ್ರದರ್ಶಿಸಲಿದ್ದಾರೆ. ಮಧುರ್ ಭಂಡಾರ್‌ಕರ್ ಅವರ ಹೊಚ್ಚ ಹೊಸ ಚಿತ್ರ 'ಹೀರೋಯಿನ್' ಚಿತ್ರದಲ್ಲಿ ಅವರ ಸ್ನಿಗ್ಧ ಸೌಂದರ್ಯ ಅನಾವರಣಗೊಳ್ಳಲಿದೆ. ಐಶ್ವರ್ಯ ರೈ ವಯಸ್ಸು ಈಗ ಹತ್ತಿರ ಹತ್ತಿರ 40 ಪ್ರಾಯಕ್ಕೆ ಸನಿಹವಾಗುತ್ತಿರುವುದೇ ಈ ಬೆಳವಣಿಗೆಗೆ ಕಾರಣ.

  ಆಕೆಯ ಸಿನಿ ಗ್ರಾಫು ಮುಂಚಿನಂತಿಲ್ಲ. ಸೆನ್ಸೆಕ್ಸ್‌ನಂತೆ ಗ್ರಾಫು ಏರಬೇಕಾದರೆ ಈ ರೀತಿಯ ಮ್ಯಾಜಿಕ್ ತಪ್ಪಿದ್ದಲ್ಲ ಎಂಬುದನ್ನು ಐಶ್ವರ್ಯ ರೈ ತಡವಾಗಿಯಾದರೂ ಗ್ರಹಿಸಿದ್ದಾರೆ. ಮುಂಬೈ ಮೂಲಗಳ ಪ್ರಕಾರ, ಐಶ್ವರ್ಯ ರೈ ತಮ್ಮ ಹೊಸ ಚಿತ್ರದಲ್ಲಿ ತಮ್ಮ ದೇಹಸಿರಿಯನ್ನು ಪ್ರದರ್ಶಿಸಿ ಪ್ರೇಕ್ಷಕರಿಗೆ ಶಾಕ್ ನೀಡಲಿದ್ದಾರಂತೆ.

  ಮೊದಲು ಈ ಪಾತ್ರಕ್ಕಾಗಿ ಕರೀನಾ ಕಪೂರ್ ಅವರನ್ನು ಕರೆತರಲು ಯೋಜಿಸಲಾಗಿತ್ತಂತೆ. ಆದರೆ ಚಿತ್ರದಲ್ಲಿನ ನಗ್ನ ಸನ್ನಿವೇಶಗಳನ್ನು ಕೇಳಿ ಕರೀನಾ ಬೆಚ್ಚಿಬಿದ್ದು ಚಿತ್ರವನ್ನು ಒಲ್ಲೆ ಎಂದರಂತೆ. ಈಗ ಅದೇ ಪಾತ್ರವನ್ನು ಐಶ್ವರ್ಯ ರೈ ಒಪ್ಪಿಕೊಂಡಿರುವುದು ವಿಶೇಷ. ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ತೆರೆಮರೆ ಸನ್ನಿವೇಶಗಳು ಚಿತ್ರದಲ್ಲಿರುತ್ತವೆ ಎಂಬುದು ಚಿತ್ರದ ಕಥಾವಸ್ತು.

  ಈ ಹಿಂದೆ ಮಧುರ್ ಭಂಡಾರ್‌ಕರ್ ತಮ್ಮ 'ಫ್ಯಾಷನ್' ಹಾಗೂ 'ಪೇಜ್ 3' ಚಿತ್ರಗಳಲ್ಲಿ ತಾರೆಗಳ ಬಾಹ್ಯ ಸೌಂದರ್ಯವನ್ನು ತೋರಿಸಿದ್ದರು. ಈಗ 'ಹೀರೋಯಿನ್' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಭಂಡಾರ್‌ಕರ್ ಜೊತೆ ಐಶ್ವರ್ಯ ರೈ ಅಭಿನಯಿಸುತ್ತಿದ್ದು, ಆಕೆಯ ರೂಪ ಲಾವಣ್ಯಗಳು ಪ್ರೇಕ್ಷಕರ ಕಣ್ಣಿಗೆ ಮುದನೀಡಲಿವೆ. (ಏಜೆನ್ಸೀಸ್)

  English summary
  Bollywood sources confirmed that leading actress Aishwarya Rai is going to play fully nude in a scene in Madhur Bandarkar's 'Heroine'. This is titled 'Heroine' and it is being directed by the hard hitting Madhur Bhandarkar who never comprises on realism.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X