ರಾಝ್ 3ರಲ್ಲಿ ಇಮ್ರಾನ್ ಬಿಪಾಶಾ ಸರಸ ಗ್ಯಾರಂಟಿ

By Mahesh

ಬಾಲಿವುಡ್ ನ ರೋಮಾಂಚನಕಾರಿ ಚಿತ್ರಗಳಿಗೆ ಹೊಸ ಭಾಷ್ಯ ಬರೆದ ಮಹೇಶ್ ಭಟ್, ವಿಕ್ರಮ ಭಟ್ ಗ್ಯಾಂಗ್ ನ ರಾಝ್ ಚಿತ್ರ ಈಗ ಮತ್ತೆ ಸುದ್ದಿಯಲ್ಲಿದೆ. ಕೃಷ್ಣ ಸುಂದರಿ ಬಿಪಾಶಾಗೆ ಬ್ರೇಕ್ ಕೊಟ್ಟ ಈ ಚಿತ್ರದ ಮೂರನೇ ಆವೃತ್ತಿಯಲ್ಲಿ ಮತ್ತೆ ಬಿಪ್ಸ್ ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಈಗೆಲ್ಲ ಹೊಸ ಚಿತ್ರ, ಹಳೆ ಬಾಯ್ ಫ್ರೆಂಡ್, ಡಯೆಟಿಂಗ್, ಶ್ರದ್ಧಾಂಜಲಿ ಸೇರಿದಂತೆ ಹತ್ತು ಹಲವು ವಿಷಯಗಳನ್ನು ಜಗತ್ತಿಗೆ ಮೊಟ್ಟಮೊದಲಿಗೆ ತಲುಪಿಸುವ ಕೀರ್ತಿ ಪ್ರಭಾವಿ ಕಿರು ಮಾಧ್ಯಮ ಟ್ವಿಟ್ಟರ್ ಗೆ ಸಿಕ್ಕಿರುವುದು ಅಚ್ಚರಿ ವಿಷಯವೇನಲ್ಲ. ಬಿಪ್ಸ್ ಹೊಸ ಚಿತ್ರದ ಸುದ್ದಿಯನ್ನು ಕೂಡಾ ಟ್ವೀಟ್ ಮೂಲಕ ಅಭಿಮಾನಿಗಳನ್ನು ತಲುಪಿದೆ.

ಮತ್ತೆ ರಾಝ್ ನಲ್ಲಿ ಕಾಣಿಸಿಕೊಳ್ಳಲಿರುವ ಬಿಪ್ಸ್ ಜೋಡಿಯಾಗಿ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ಇದ್ದಾರೆ. ಹಶ್ಮಿಗೆ ಮರ್ಡರ್ ನ ಹೊಸ ಆವೃತ್ತಿಯಲ್ಲಿ ಸಾಥ್ ನೀಡಿದ್ದ ಲಂಕಾ ಬ್ಯೂಟಿ ಜಾಕ್ವಲೀನ್ ಫರ್ನಾಂಡೀಸ್ ಕೂಡಾ ರಾಝ್ 3 ರಲ್ಲಿ ಅಭಿನಯಿಸುತ್ತಿದ್ದಾರೆ.

2002ರಲ್ಲಿ ತೆರೆ ಕಂಡಿದ್ದ ರಾಝ್ ಚಿತ್ರ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಬಿಪ್ಸ್ ಅಭಿನಯ ಕಂಡು ಬಾಲಿವುಡ್ ಬೆರಗಾಗಿತ್ತು.2009ರಲ್ಲಿ ರಾಝ್ 2 ನಲ್ಲಿ ಬಿಪ್ಸ್ ಅಭಿನಯಿಸಿರಲಿಲ್ಲ.

ದಶಕದ ನಂತರ ಮಹೇಶ್ ಭಟ್ ಗ್ಯಾಂಗ್ ಗೆ ಮತ್ತೆ ಬಿಪ್ಸ್ ಸೇರ್ಪಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ರಾಝ್ 3 ರೋಮಾಂಚನಕಾರಿ ದೃಶ್ಯಗಳು, ಇಮ್ರಾನ್ ಬಿಪ್ಸ್ ಸರಸ ಸೆಣೆಸಾಟ ಕಾಣಲು ಬಾಲಿವುಡ್ ಕಾತುರದಿಂದ ಕಾದಿದೆ.

More from Filmibeat

English summary
Bollywood actress Bipasha Basu has officially been signed up for the third installment of the hit movie Raaz. Filmmaker Vikram Bhatt himself has confirmed her casting. She will star alongside actors Emraan Hashmi, Jacqueline Fernandes in film Raaz 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X