ಶಾರುಖ್ ರಾ. ಒನ್ ಬಿಡುಗಡೆಗೆ ಒಂದು ಕೋಟಿ ಷರತ್ತು

ಈ ಸಿನಿಮಾ ಬಿಡುಗಡೆಗೆ ವಿರೋಧಿಸಿ ಟೆಲಿವಿಷನ್ ಪ್ರೊಡ್ಯೂಸರ್ ಹಾಗೂ ಬರಹಗಾರ ಯಶ್ ಪಟ್ನಾಯಕ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಅದಕ್ಕೆ ಅವರು ಹೇಳುವ ಕಾರಣ "ರಾ. ಒನ್ ಕಥೆ ನನ್ನದು. ನಾನೇ ಆ ಮೂಲ ಕಥೆಯ ಕಾಪಿರೈಟ್ ಮಾಲೀಕ. ರೆಡ್ ಚಿಲ್ಲೀಸ್ ಅದನ್ನು ನಿರ್ಮಿಸುತ್ತಿದೆ. ಹಾಗಾಗಿ ನನಗೆ ಬಿಡುಗಡೆಗೆ ಮೊದಲು ಕಥೆಯ ಹಣ ಸಂದಾಯವಾಗಬೇಕು."
ಅದಕ್ಕೆ ಸಮ್ಮತಿಸಿದ ಕೋರ್ಟ್ "ಸಿನಿಮಾ ಉದ್ಯಮದ ಮಂದಿ ಬೇರೆಯವರನ್ನು ಶೋಷಿಸುತ್ತಿದ್ದಾರೆ. ನಾಳೆ ಡಿಪಾಸಿಟ್ ಹಣವನ್ನು ಕಟ್ಟದಿದ್ದಲ್ಲಿ ಬಿಡುಗಡೆಗೆ ತಡೆಯಾಜ್ಞೆ ಆದೇಶ ಹೊರಡಿಸಲಾಗುವುದು" ಎಂದು ಹೇಳಿದೆ. "ಸದ್ಯದಲ್ಲೇ ಇದಕ್ಕೆ ಸಂಬಂಧಿಸಿದಂತೆ ವಾದ-ವಿವಾದವನ್ನು ಕೇಳಲಿದ್ದೇವೆ, ಅದಕ್ಕೂ ಮೊದಲು ಡಿಪಾಸಿಟ್ ಮಡಗಿ" ಎಂದೂ ಗುಡುಗಿದೆ ಬಾಂಬೆ ಹೈ ಕೋರ್ಟ್.
ಬಿಡುಗಡೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಯಶ್ ಪಟ್ನಾಯಕ್, "ನನಗೆ ಕಥೆಯ ಕ್ರೆಡಿಟ್ ಕೊಡದಿದ್ದರೆ ಬಂದ ಲಾಭದಲ್ಲಿ ಶೇ. ಹತ್ತರಷ್ಟನ್ನು ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅವರು ಈ ರಾ. ಒನ ಕಥೆಯನ್ನು ಅದರ ಕಥೆಗಾರ "ಮುಶ್ತಾಖ್ ಶೇಖ್"ರೊಂದಿಗೆ 2006ರಲ್ಲೇ ಚರ್ಚಿಸಿದ್ದಾಗಿಯೂ ಹೇಳಿದ್ದಾರೆ.
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಮೋಹಿತ್ ಷಾ ಮತ್ತು ರೋಶನ್ ದಾಲ್ವಿ ಈ ಆದೇಶವನ್ನು ಹೊರಡಿಸಿದ್ದು ಶಾರುಖ್ ಹಾಗೂ ಕರೀನಾ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ. ಒಟ್ಟಿನಲ್ಲಿ ಈಗ ರಾ. ಒನ್ ಗೆ 'ರಾ ರಾ... ಅನ್ನುತ್ತಿದ್ದ ಸಿನಿಮಾ ಪ್ರೇಕ್ಷಕರು ಕಣ್ಣು ಬಾಯಿ ಬಿಡುತ್ತಾ ಆಕಾಶಕ್ಕೆ ದೃಷ್ಟಿ ನೆಟ್ಟಿದ್ದಾರೆ.


Click it and Unblock the Notifications











