ಜೂನಿಯರ್ ಮಲ್ಯ ಜತೆ ದೀಪಿಕಾ ಪಡುಕೋಣೆ ಜೂಟ್
ಬಾಲಿವುಡ್‌ನ ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ ಹಾಗೂ ಸಿದ್ಧಾರ್ಥ್ ಮಲ್ಯ ಇಬ್ಬರೂ ಫಾರಿನ್‌ಗೆ ಜೂಟ್ ಹೇಳಿದ್ದಾರೆ. ಈ ಜೋಡಿ ಹಕ್ಕಿಗಳು ಈಗ ವಿದೇಶಿ ಪ್ರವಾಸಕ್ಕೆ ಪ್ಲಾನ್ ಹಾಕಿದ್ದಾರೆ. ಜನವರಿ 2, 2012ರ ತನಕ ಈ ಜೋಡಿ 25 ದಿನಗಳ ಕಾಲ ವಿದೇಶದಲ್ಲಿ ಕೈಕೈ ಹಿಡಿದು ಸುತ್ತಿ ಬರಲಿದ್ದಾರೆ.
ಹಾಲಿಡೇ ಮೂಡ್‌ನಲ್ಲಿರುವ ಇವರಿಬ್ಬರೂ ಡಿಸೆಂಬರ್ 11, 2011ಕ್ಕೆ ಫ್ಲೈಟ್ ಹತ್ತಲಿದ್ದಾರೆ. ಈಗಾಗಲೆ ಇವರಿಬ್ಬರ ವಿಮಾನದ ಟಿಕೆಟ್‌ಗಳು ಬುಕ್ ಆಗಿವೆ ಎನ್ನುತ್ತವೆ ಬಾಲಿವುಡ್ ಮೂಲಗಳು. ಫ್ರಾನ್ಸ್‌ನ ಸೇಂಟ್ ಟ್ರೋಫೆಝ್ ಸೇರಿದಂತೆ ಹಲವು ರಮಣೀಯ ತಾಣಗಳಲ್ಲಿ 25 ದಿನಗಳ ಕಾಲ ಮೈಮರೆಯಲಿದೆ ಜೋಡಿ.
ದೀಪಿಕಾ ಪಡುಕೋಣೆ ತಮ್ಮ ಎಕ್ಸ್ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಜತೆಗಿನ ಚಿತ್ರ 'ಹೇ ಜವಾನಿ ಹೈ ದೀವಾನಿ' ಚಿತ್ರಕ್ಕೆ ಸಹಿ ಹಾಕಿದ್ದಾರೆ. ಡಿಸೆಂಬರ್ 10ರಂದು ಕರಣ್ ಜೋಹರ್ ಜೊತೆಗಿನ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿ ಡಿ.11ರಂದು ಸಿದ್ಧಾರ್ಥ್ ಜತೆ ಜೂಟ್ ಹೇಳಲಿದ್ದು ರಣಬೀರ್ ಪರಿಸ್ಥಿತಿ ಇಂಗುತಿಂದ ಮಂಗನಂತಾಗಿದೆ. (ಏಜೆನ್ಸೀಸ್)
More from Filmibeat
English summary
Actress Deepika Padukone, who is making her comeback with her ex-boyfriend Ranbir Kapoor, is reportedly set for a 25 day exotic tour, but not with Ranbir! The buzz in the tinsel town is that the Bollywood star has planned to spend annual vacation with none other than airline and liquor magnate Sidhartha Mallya.
ದೀಪಿಕಾ ಪಡುಕೋಣೆ ಸಿದ್ಧಾರ್ಥ್ ಮಲ್ಯ ಬಾಲಿವುಡ್ ರಣಬೀರ್ ಕಪೂರ್ ಗಾಸಿಪ್ deepika padukone siddhartha mallya bollywood ranbir kapoor gossip


Click it and Unblock the Notifications











