ರಾಹುಲ್ ಜೀ ಮುಝೇ ಮಾಫ್ ಕರೋ; ಕತ್ರಿನಾ ಕೈಫ್
ಕಾಂಗ್ರೆಸ್ ಪಕ್ಷದ ರಾಜಕುಮಾರ ರಾಹುಲ್ ಗಾಂಧಿ ಅವರನ್ನು ಬಾಲಿವುಡ್ ತಾರೆ ಕತ್ರಿನಾ ಕೈಫ್ ಕ್ಷಮೆಯಾಚಿಸಿದ್ದಾರೆ. ರಾಹುಲ್ ಅರ್ಧಂಬರ್ಧ ಭಾರತೀಯ ಎಂದು ಹೇಳುವ ಮೂಲಕ ಕತ್ರಿನಾ ವಿವಾದ ಸೃಷ್ಟಿಸಿದ್ದರು. ಆಕೆ ಹಾಗೆ ಹೇಳಿಕೆ ನೀಡಿದ್ದೇ ಕಾಂಗ್ರೆಸ್ ಪಕ್ಷದ ಪಿತ್ತ ಕೆರಳಿಸಿತ್ತು.
ಇನ್ನೇನು ಅವಾಂತರಗಳಾಗುತ್ತವೋ ಎಂದು ಎಚ್ಚೆತ್ತುಕೊಂಡ ಕತ್ರಿನಾ, ನನ್ನ ಹೇಳಿಕೆಯನ್ನು ಮಾಧ್ಯಮಗಳು ಅತಿರಂಜಿತವಾಗಿ ತಿರುಚಿ ಬರೆದಿವೆ. ನನ್ನ ಹೇಳಿಕೆಯಿಂದ ರಾಹುಲ್ ಗಾಂಧಿ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕತ್ರಿನಾ, ಎಲ್ಲರೂ ನನ್ನನ್ನು ಅರ್ಧಂಬರ್ಧ ಏಷ್ಯನ್ ಎಂದು ಕರೆಯುವುದು ತಪ್ಪು. ನಾನೊಬ್ಬಳೆ ಅಲ್ಲ. ರಾಹುಲ್ ಗಾಂಧಿ ಕೂಡ ಅರ್ಧಂಬರ್ಧ ಭಾರತೀಯ. ಅವರು ಅರ್ಧ ಭಾರತೀಯನಾದರೆ ಇನ್ನರ್ಧ ಇಟಾಲಿಯನ್ ಎಂದು ಹೇಳಿದ್ದರು. ಈಗ ನಾನು ಹೇಳಿದ್ದು ಹಾಗಲ್ಲ ಹೀಗೆ ಎಂದು ಉಲ್ಟಾ ಹೊಡೆದಿದ್ದಾರೆ ಕತ್ರಿನಾ. (ಏಜೆನ್ಸೀಸ್)
More from Filmibeat
English summary
Actress Katrina Kaif has apologized to Rahul Gandhi for her controversial statement on Rahul. she said that Rahul Gandhi is half Indian and half Italian because his father is an Indian and his mother is an Italian by birth.


Click it and Unblock the Notifications











