ದಕ್ಷಿಣಕ್ಕೆ ಮುಖ ತೋರಿಸಲಾರೆ ಎಂದ ಟಾಪ್ ನಟಿ

ಬಾಲಿವುಡ್ ಬೆಡಗಿ ಕತ್ರಿನಾ ಕೈಫ್, ಐಟಂ ಗರ್ಲ್ ರಾಖಿ ಸಾವಂತ್ ರನ್ನು ಓವರ್ ಟೇಕ್ ಮಾಡಿ ನಂ 1 ಸ್ಥಾನದಲ್ಲಿ ಕುಳಿತಿದ್ದಾರೆ. ಇದೀಗ ಕತ್ರಿನಾ ಕೈಗೆ ಸಾಕಷ್ಟು ಐಟಂ ಹಾಡುಗಳು ಬಂದು ಬೀಳುತ್ತಿವೆ. ಬಾಲಿವುಡ್ ನಲ್ಲಿ ಇರುವ ಸಾಕಷ್ಟು ಅವಕಾಶಗಳ ಜೊತೆಗೆ ಸೌತ್ ಇಂಡಿಯಾ ಕೂಡ ಕತ್ರಿನಾರನ್ನು ಕರೆಯುತ್ತಿವೆ.

ಟೈಮ್ಸ್ ಆಫ್ ಇಂಡಿಯಾ ವರದಿಯಂತೆ, ಈ ಕತ್ರಿನಾ ರಾಖಿ ಸಾವಂತ್ ಬೇಡಿಕೆಯನ್ನು ಕಸಿದುಕೊಂಡಿದ್ದಾರೆ. ಅಷ್ಟೇ ಅಲ್ಲ, ದಕ್ಷಿಣ ಭಾರತದ ಚಿತ್ರರಂಗ ಕೂಡ ರಾಖಿಗೆ ಹಾಕುತ್ತಿದ್ದ ಮಣೆಯನ್ನು ಕತ್ರಿನಾಗೆ ನೀಡುತ್ತಿದೆ. ಆದರೆ ಕತ್ರಿನಾ ದಕ್ಷಿಣಕ್ಕೆ ಬರಲು ಸುತಾರಾಂ ಒಪ್ಪುತ್ತಿಲ್ಲವಂತೆ. ತೀರಾ ಇತ್ತೀಚಿಗೆ ಆ ರೀತಿಯ ಅವಕಾಶವೊಂದನ್ನು ಕತ್ರಿನಾ ನಿರಾಕರಿಸಿದ್ದಾರೆ.

ಶೀಲಾ ಕೀ ಜವಾನಿ ಹಾಡಿನ ನಂತರ ಕತ್ರಿನಾ ಡಾನ್ಸರ್ ಆಗಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಜೊತೆಗೆ ಅಗ್ನಿಪಥ್ ಚಿತ್ರಕ್ಕಾಗಿ 'ಚಿಕ್ನಿ ಚಮೇಲಿ' ಗೆ ಕುಣಿದ ಮೇಲಂತೂ ಈಕೆ ಕೈಗೇ ಸಿಗದಷ್ಟು ಮೇಲೆ ಹತ್ತಿ ಕೂತಿದ್ದಾಳೆ. ಸದ್ಯ ಬಾಲಿವುಡ್ ಕೈಗೇ ಸಿಗುವುದು ಕಷ್ಟ. ಇನ್ನು ದಕ್ಷಿಣಕ್ಕೆ ಮುಖ ಮಾಡುವುದು ಯಾವಾಗಲೋ...(ಒನ್ ಇಂಡಿಯಾ ಕನ್ನಡ)

More from Filmibeat

English summary
Katrina Kaif wont do item numbers for South Indian films despite she was being offered huge amount of money for a song.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X