ಬಾಲಿವುಡ್ ಹೀ ಮ್ಯಾನ್‌ ಧರ್ಮೇಂದ್ರನಿಗೆ ಪ್ರತಿಷ್ಠಿತ ಫಾಲ್ಕೆ ರತ್ನ

By Rajendra

ಬಾಲಿವುಡ್ ಚಿತ್ರರಂಗದ ಹೀ ಮ್ಯಾನ್ ಎಂದೇ ಖ್ಯಾತನಾದ ನಟ ಧರ್ಮೇಂದ್ರ(75) ಅವರು ಪ್ರತಿಷ್ಠಿತ ಫಾಲ್ಕೆ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ಸಲ್ಲಿಸಿದ ಐದು ದಶಕಗಳ ಸೇವೆಗಾಗಿ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಮೇ 3ರಂದು ಮುಂಬೈನಲ್ಲಿ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಇತ್ತೀಚೆಗೆ ತೆರೆಕಂಡ ಹಿಂದಿ ಚಿತ್ರ 'ಯಮ್ಲ ಪಗ್ಲ ದೀವಾನಾ' ಚಿತ್ರದಲ್ಲಿ ಧರ್ಮೇಂದ್ರ ಅಭಿನಯಿಸಿದ್ದರು. ಒಂದು ಕಾಲದ ಅಭಿನೇತ್ರಿ ಆಶಾ ಪಾರೇಕ್ ಅವರಿಗೆ ಮಹಾನ್ ಕಲಾವಿದೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿಯ ಕಾರ್ಯಕ್ರಮ ನಿರ್ದೇಶಕ ಅಶೋಕ್ ಶೇಖರ್ ತಿಳಿಸಿದ್ದಾರೆ. ಶತ್ರುಘ್ನ ಸಿನ್ಹಾ ಅವರಿಗೆ ಮಹಾನ್ ಕಲಾವಿದ ಪ್ರಶಸ್ತಿ ಹಾಗೂ ಸೋನಾಕ್ಷಿ ಸಿನ್ಹಾ ಅವರಿಗೆ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಇದೇ ವರ್ಷ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರಿಗೂ ಫಾಲ್ಕೆ ರತ್ನ ಪ್ರಶಸ್ತಿ ನೀಡುವ ಸಾಧ್ಯತೆಗಳಿವೆ. ರಾಜ್‌ಕುಮಾರ್ ಗುಪ್ತ ಅವರ "No One Killed Jessica" ಚಿತ್ರದಲ್ಲಿ ಪತ್ರಕರ್ತೆಯಾಗಿ ನೀಡಿದ ಅದ್ಭುತ ನಟನೆಗಾಗಿ ಆಕೆಗೆ ಈ ಪ್ರಶಸ್ತಿ ನಿರೀಕ್ಷಿಸಲಾಗಿದೆ. ಮತ್ತೊಬ್ಬ ಬೆಡಗಿ ಪ್ರಿಯಾಂಕಾ ಚೋಪ್ರಾ ಅವರ "7 Khoon Maaf" ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಆಕೆಯನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ.

"ಬ್ಯಾಂಡ್ ಬಾಜಾ ಬಾರಾತ್" ಚಿತ್ರದಲ್ಲಿನ ಅಭಿನಯಕ್ಕಾಗಿ ಯಶಸ್ವಿ ತಾರಾ ಜೋಡಿ ರಣವೀರ್ ಸಿಂಗ್ ಹಾಗೂ ಅನುಷ್ಕಾ ಶರ್ಮಾ ಅವರಿಗೂ ಪ್ರಶಸ್ತಿ ನೀಡಲಾಗುತ್ತದೆ. 'ದಬಾಂಗ್' ಚಿತ್ರದ ಚೊಚ್ಚಲ ನಿರ್ಮಾಣಕ್ಕಾಗಿ ನಿರ್ಮಾಪಕ ಅರ್ಜಾಜ್ ಖಾನ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಕಟನೆಯಲ್ಲಿತಿಳಿಸಿದೆ.

More from Filmibeat

English summary
The original He-Man of Bollywood Dharmendra, 75, will receive the Phalke Ratna, the highest award by the Dadasaheb Phalke Academy, for over five decades of contribution to Indian cinema. The award will be given away at a ceremony in Mumbai May 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X