For Quick Alerts
  ALLOW NOTIFICATIONS  
  For Daily Alerts

  ಜೆನಿಲಿಯಾ ಗಂಡನ ಜೊತೆ ಪ್ರಿಯಾಮಣಿ ರೊಮಾನ್ಸ್

  |

  ಮಣಿರತ್ನಂ ನಿರ್ದೇಶನದ 'ರಾವಣ್' ಹಾಗೂ ರಾಮ್ ಗೋಪಾಲ್ ವರ್ಮಾರ 'ರಕ್ತಚರಿತ್ರ' ಚಿತ್ರದಲ್ಲಿ ನಟಿಸಿರುವ ಕನ್ನಡತಿ, ಪಂಚಭಾಷಾ ತಾರೆ ಪ್ರಿಯಾಮಣಿ ಮತ್ತೆ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಇಷ್ಟು ದಿನ ಹಿಂದಿ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದ ಪ್ರಿಯಾ ಇದೀಗ ಸಾಕಷ್ಟು ಮಹತ್ವವಿರುವ, ಚಿತ್ರದುದ್ದಕ್ಕೂ ತೆರೆಯ ಮೇಲೆ ಕಾಣಿಸಿಕೊಳ್ಳುವ ನಾಯಕಿ ಪಾತ್ರದಲ್ಲಿ ನಟಿಸಲಿದ್ದಾರೆ.

  ನಟಿ ಜೆನಿಲಿಯಾ ಪತಿ ರಿತೇಶ್ ದೇಶ್ ಮುಖ್ ನಾಯಕತ್ವದ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಪ್ರಿಯಾಮಣಿ. ಚಂದ್ರಕಾಂತ್ ಸಿಂಗ್ ಈ ಚಿತ್ರದ ನಿರ್ದೇಶಕರು. ಸದ್ಯದಲ್ಲಿಯೇ ಪ್ರಾರಂಭವಾಗಲಿರುವ ಈ ಚಿತ್ರದ ಚಿತ್ರೀಕರಣಕ್ಕೆ ಪ್ರಿಯಾ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಸದ್ಯಕ್ಕೆ ಪ್ರಿಯಾ ಕನ್ನಡದ 'ಅಣ್ಣಾ ಬಾಂಡ್' ಚಿತ್ರದಲ್ಲಿ ಬ್ಯುಸಿ.

  ಕನ್ನಡದ ಅಣ್ಣಾ ಬಾಂಡ್, ತೆಲುಗು ಚಿತ್ರ ಬಾಬುರಾವ್ ನಿನ್ನೋಡಾಲ, ಮಲೆಯಾಳಂನ ಗ್ರಾಂಡ್ ಮಾಸ್ಟರ್ ಸದ್ಯಕ್ಕೆ ಪ್ರಿಯಾಮಣಿ ಕೈಯಲ್ಲಿರುವ ಚಿತ್ರಗಳು. ರಿತೇಶ್ ದೇಶ್ ಮುಖ್ ಚಿತ್ರವಲ್ಲದೇ ಇನ್ನೊಂದು ಬಾಲಿವುಡ್ ಚಿತ್ರದಲ್ಲೂ ಪ್ರಿಯಾಗೆ ಅವಕಾಶ ಬಂದಿದೆ. ಆದರೆ ಅದಿನ್ನೂ ಫೈನಲ್ ಆಗಿಲ್ಲ. (ಏಜೆನ್ಸೀಸ್ )

  English summary
  Priyamani debut Bollyoood film Ravan, the Hindi version of Raavanan, did not give desired results in Hindi film industry. In fact, her second attempt in Rakta Chatria also failed to come to fruition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X