ದೀಪಿಕಾ ರಣಬೀರ್ ಮತ್ತೆ ಅಪ್ಪಿಕೊಂಡ ಅಮೃತ ಘಳಿಗೆ

By Rajendra

ಹಾವು ಮುಂಗುಸಿಯಂತಾಗಿದ್ದ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಮತ್ತೆ ಒಂದಾಗಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡ ಅಮೃತ ಘಳಿಗೆಯಿದು. ಈಗ ಇಬ್ಬರೂ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದು ಭಗ್ನ ಪ್ರೇಮಿಗಳು ಮತ್ತೆ ಒಂದಾಗಿದ್ದಾರೆ.

ಅಜಯ್ ಮುಖರ್ಜಿ ಆಕ್ಷನ್ ಕಟ್ ಹೇಳುತ್ತಿರುವ 'ಹೇ ಜವಾನಿ ಹೈ ದೀವಾನಿ' ಚಿತ್ರದಲ್ಲಿ ಇಬ್ಬರೂ ಮತ್ತೆ ಬಣ್ಣಹಚ್ಚಿದ್ದಾರೆ. ಈ ಪ್ರೇಮಕಥಾನಕವನ್ನು ಧರ್ಮ ಪ್ರೊಡಕ್ಷನ್ಸ್ ಬ್ಯಾನರಿನಡಿ ಕರಣ್ ಜೋಹರ್ ನಿರ್ಮಿಸುತ್ತಿದ್ದಾರೆ.

ತಮ್ಮ ಚಿತ್ರದ ಬಗ್ಗೆ ಮಾತನಾಡಿರುವ ಕರಣ್, 70ರ ದಶಕದಲ್ಲಿ ತೆರೆಕಂಡ ಆರ್ ಡಿ ಬರ್ಮನ್ ಅವರ 'ಜವಾನಿ ದೀವಾನಿ' ಚಿತ್ರದ "ಹೇ ಜವಾನಿ ಹೈ ದೀವಾನಿ..." ಹಾಡಿನ ಸಾಲನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಪ್ರೇಮಕಥಾನಕದ ಚಿತ್ರಕ್ಕೆ ದೀಪಿಕಾ ಮತ್ತು ರಣಬೀರ್ ಜೀವತುಂಬಲಿದ್ದಾರೆ. ಅವರ ಆನ್‌ಲೈನ್ ಕೆಮಿಸ್ಟ್ರಿ ಕೂಡ ಅಷ್ಟೇ ಚೆನ್ನಾಗಿದೆ ಎಂದಿದ್ದಾರೆ.

ಈ ಹಿಂದೆ ದೀಪಿಕಾ ಮತ್ತು ರಣಬೀರ್ ಜೋಡಿ 'ಬಚ್‌ನಾ ಏ ಹಸೀನೋ' ಚಿತ್ರದಲ್ಲಿ ಅಭಿನಯಿಸಿದ್ದರು. ಕರಣ್ ಜೊತೆ ರಣಬೀರ್‌ಗೆ ಇದು ಎರಡನೇ ಚಿತ್ರ. ಆದರೆ ದೀಪಿಕಾ ಮಾತ್ರ ಇದು ಚೊಚ್ಚಲ ಚಿತ್ರ. 'ಹೇ ಜವಾನಿ ಹೈ ದೀವಾನಿ' ಚಿತ್ರ 2012ರ ಜನವರಿಗೆ ತೆರೆಗ ಅಪ್ಪಳಿಸಲಿದೆ. (ಏಜೆನ್ಸೀಸ್)

More from Filmibeat

English summary
Actor Ranbir Kapoor and actress Deepika Padukone, who reportedly dated each other once, are now back on track. The Bachna Ae Haseeno pair is once again joining hands for another movie. The Bollywood duo will star together in the film Yeh Jawani Hai Deewani, which is directed by Ayan Mukherjee and produced by Karan Johar and his banner Dharma Productions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X