ಅನುಷ್ಕಾ ಶರ್ಮ ಪ್ರೇಮಿ ರಣವೀರ್ ಸಿಂಗ್ ಅಂತಿಂಥವನಲ್ಲ

ಅನುಷ್ಕಾ ಶರ್ಮ ಹಾಗೂ ರಣವೀರ್ ಸಿಂಗ ಮಾಜಿ ಪ್ರೇಮಿಗಳೆಂಬುದು ಜಗಜ್ಜಾಹೀರಾದ ವಿಷಯ. ಅದನ್ನು ನಂಬಿ ಅವಳ ಅಭಿಮಾನಿಯೊಬ್ಬ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡಿದ್ದಾನೆ. ಪಕ್ಕದಲ್ಲೇ ಇದ್ದ ರಣವೀರ್ ರಾಂಗ ಆಗಿ ರಣಕಹಳೆ ಊದಿಯೇ ಬಿಡೋದೆ! "ಅವಳು ನನ್ನ ಗರ್ಲ್ ಫ್ರೆಂಡ್, ನಿನ್ನ ಮೂಗು ಮುರಿದು ಬಿಡ್ತೀನಿ" ಎಂದು ಅಬ್ಬರಿಸಿದನಂತೆ.
ಅಭಿಮಾನಿಯೂ ಕೂಡ ಅಂತಿಂಥವನಲ್ಲ, ಮಹಾ ಕುತಂತ್ರಿಯೇ. "ನನ್ನ ಮೂಗು ಮಾಮೂಲಿಯದಲ್ಲ. ನಿನ್ನ ಬೆದರಿಕೆಗೆ ನಾನೇನು ಹೆದರುವುದಿಲ್ಲ" ಎಂದು ರಣವೀರ್ ಗೆ ತಿರುಗಿ ಅವಾಜ್ ಹಾಕಿದ್ನಂತೆ. ಅನುಷ್ಕಾ ಮಾತ್ರ ಆ ಅಭಿಮಾನಿಯ ಮಾತನ್ನು 'ಅಭಿಮಾನ' ದಂತೆ ನೋಡಿ ಗೆಲುವಾದ್ರಂತೆ.
ಈಗ ನೀವೇ ಹೇಳಿ ಯಾರು ಗ್ರೇಟ್? ಅನುಷ್ಕಾರನ್ನು ಪ್ತೀತಿ ಮುರಿದುಬಿದ್ದ ಮೇಲೂ ಪ್ರೀತಿಸುತ್ತಿರುವ ಪ್ರೇಮಿ ರಣವೀರ್ ಅಥವಾ ಇಂಥ ಪ್ರೇಮಿ ಹಾಗೂ ಅಂಥ ಅಭಿಮಾನಿ ಇಬ್ಬರನ್ನೂ ಪಡೆದಿರುವ ಅನುಷ್ಕಾ ಶರ್ಮಾ? ರಾಮ ರಾಮಾ.., ಅದಕ್ಕೇ ಕವಿಯೊಬ್ಬರ ಗೀತೆಯನ್ನು ಬಾಲಿವುಡ್ ನಲ್ಲಿ ಹೀಗೆ ಹಾಡುತ್ತಿದ್ದಾರೆ...
ಪ್ರೇಮಕಥೆಗಳಿಗೆ ಕೊನೆಯುಂಟೇ, ಬಾಲಿವುಡ್ ನಟನಟಿಯರು ಇರೋ ತನಕ..." ಅದಕ್ಕೆ ರಣವೀರ್ ಹಾಗೂ ಅನುಷ್ಕಾ "ನೀವು ಹೇಗಾದ್ರೂ ಹಾಡ್ಕೊಳ್ಳಿ, ನಮ್ಮನ್ನ್ ಮಾತ್ರ ಆಡ್ಕೊಳ್ಳೋದ್ ಬಿಟ್ಬಿಡಿ" ಎಂದು ಹೇಳಿದ್ದು ಬಾಲಿವುಡ್ ಅಂಗಳದ ಮೆಟ್ಟಿಲನ್ನೂ ಮುಟ್ಟಿಲ್ವಂತೆ. ನೀವೂ ಹಾಡ್ಕೊಳ್ಳಿ ಹೇಗೆ ಬೇಕಾದ್ರೂ... ಯಾರ್ದೋ ಸುದ್ದಿ, ಎಲ್ಲರಿಗೂ ವಾರ್ತೆ..!


Click it and Unblock the Notifications











