twitter
    For Quick Alerts
    ALLOW NOTIFICATIONS  
    For Daily Alerts

    ಅನುಷ್ಕಾ ಶರ್ಮ ಪ್ರೇಮಿ ರಣವೀರ್ ಸಿಂಗ್ ಅಂತಿಂಥವನಲ್ಲ

    |

    Anushka Sharma
    ಇದೊಂದು ರಿಯಲ್ ಲವ್ ಸ್ಟೋರಿ. ಬಾಲಿವುಡ್ ನಲ್ಲಿ ದಿನಕ್ಕೊಂದು ಪ್ರೇಮಕಥೆಗಳು ಹುಟ್ಟಿಕೊಳ್ಳುತ್ತವೆ. ದಿನಕ್ಕೊಂದು ಮುರಿದು ಹೋಗುತ್ತವೆ. ಇದರಲ್ಲೇನು ವಿಶೇಷ ಅಂತೀರಾ? ತಾಳಿ, ಇದು ಮುರಿದ ಪ್ರೇಮವಾದರೂ ಮಾಜಿ ಪ್ರಿಯಕರ ಮಾತ್ರ ಇನ್ನೂ ಪ್ರೇಮಿಯಾಗಿಯೇ ಇದ್ದಾನೆ. ಅವನೇ ರಣವೀರ್ ಸಿಂಗ್.

    ಅನುಷ್ಕಾ ಶರ್ಮ ಹಾಗೂ ರಣವೀರ್ ಸಿಂಗ ಮಾಜಿ ಪ್ರೇಮಿಗಳೆಂಬುದು ಜಗಜ್ಜಾಹೀರಾದ ವಿಷಯ. ಅದನ್ನು ನಂಬಿ ಅವಳ ಅಭಿಮಾನಿಯೊಬ್ಬ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡಿದ್ದಾನೆ. ಪಕ್ಕದಲ್ಲೇ ಇದ್ದ ರಣವೀರ್ ರಾಂಗ ಆಗಿ ರಣಕಹಳೆ ಊದಿಯೇ ಬಿಡೋದೆ! "ಅವಳು ನನ್ನ ಗರ್ಲ್ ಫ್ರೆಂಡ್, ನಿನ್ನ ಮೂಗು ಮುರಿದು ಬಿಡ್ತೀನಿ" ಎಂದು ಅಬ್ಬರಿಸಿದನಂತೆ.

    ಅಭಿಮಾನಿಯೂ ಕೂಡ ಅಂತಿಂಥವನಲ್ಲ, ಮಹಾ ಕುತಂತ್ರಿಯೇ. "ನನ್ನ ಮೂಗು ಮಾಮೂಲಿಯದಲ್ಲ. ನಿನ್ನ ಬೆದರಿಕೆಗೆ ನಾನೇನು ಹೆದರುವುದಿಲ್ಲ" ಎಂದು ರಣವೀರ್ ಗೆ ತಿರುಗಿ ಅವಾಜ್ ಹಾಕಿದ್ನಂತೆ. ಅನುಷ್ಕಾ ಮಾತ್ರ ಆ ಅಭಿಮಾನಿಯ ಮಾತನ್ನು 'ಅಭಿಮಾನ' ದಂತೆ ನೋಡಿ ಗೆಲುವಾದ್ರಂತೆ.

    ಈಗ ನೀವೇ ಹೇಳಿ ಯಾರು ಗ್ರೇಟ್? ಅನುಷ್ಕಾರನ್ನು ಪ್ತೀತಿ ಮುರಿದುಬಿದ್ದ ಮೇಲೂ ಪ್ರೀತಿಸುತ್ತಿರುವ ಪ್ರೇಮಿ ರಣವೀರ್ ಅಥವಾ ಇಂಥ ಪ್ರೇಮಿ ಹಾಗೂ ಅಂಥ ಅಭಿಮಾನಿ ಇಬ್ಬರನ್ನೂ ಪಡೆದಿರುವ ಅನುಷ್ಕಾ ಶರ್ಮಾ? ರಾಮ ರಾಮಾ.., ಅದಕ್ಕೇ ಕವಿಯೊಬ್ಬರ ಗೀತೆಯನ್ನು ಬಾಲಿವುಡ್ ನಲ್ಲಿ ಹೀಗೆ ಹಾಡುತ್ತಿದ್ದಾರೆ...

    ಪ್ರೇಮಕಥೆಗಳಿಗೆ ಕೊನೆಯುಂಟೇ, ಬಾಲಿವುಡ್ ನಟನಟಿಯರು ಇರೋ ತನಕ..." ಅದಕ್ಕೆ ರಣವೀರ್ ಹಾಗೂ ಅನುಷ್ಕಾ "ನೀವು ಹೇಗಾದ್ರೂ ಹಾಡ್ಕೊಳ್ಳಿ, ನಮ್ಮನ್ನ್ ಮಾತ್ರ ಆಡ್ಕೊಳ್ಳೋದ್ ಬಿಟ್ಬಿಡಿ" ಎಂದು ಹೇಳಿದ್ದು ಬಾಲಿವುಡ್ ಅಂಗಳದ ಮೆಟ್ಟಿಲನ್ನೂ ಮುಟ್ಟಿಲ್ವಂತೆ. ನೀವೂ ಹಾಡ್ಕೊಳ್ಳಿ ಹೇಗೆ ಬೇಕಾದ್ರೂ... ಯಾರ್ದೋ ಸುದ್ದಿ, ಎಲ್ಲರಿಗೂ ವಾರ್ತೆ..!

    English summary
    Actor Ranveer Singh blasted one of Anushka Sharma fans who expressed his feelings towards her. Ranveer claimed that Anushka is his girlfriend.
 
    Friday, October 21, 2011, 15:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X