For Quick Alerts
  ALLOW NOTIFICATIONS  
  For Daily Alerts

  ಜಾಹೀರಾತು ಕಂಪನಿಗಳಿಗೆ ಸಲ್ಲೂ ಭೂರಿ ಭೋಜನ

  |

  ನಟ ಸಲ್ಮಾನ್ ಖಾನ್ ಯಾವಾಗಲೂ ಏನಾದರೂ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಶಾರುಖ್ ಖಾನ್ ಕಂಡರಂತೂ ಆಗುವುದೇ ಇಲ್ಲ ಸಲ್ಮಾನ್ ಗೆ. ಶಾರುಖ್ ಜೊತೆ ಯಾವಾಗಲೂ ಸ್ಪರ್ಧೆಯಲ್ಲಿರುವ ಸಲ್ಲೂ, ಬ್ರಾಂಡ್ ಜಾಹೀರಾತುಗಳಲ್ಲಂತೂ ಶಾರುಖ್ ರನ್ನು ಸೈಡ್ ಗೆ ತಳ್ಳಲು ಸಲ್ಲೂ ಯಾವಾಗಲೂ ಪ್ರಯತ್ನಿಸುತ್ತಲೇ ಇರುತ್ತಾರೆ.

  ಇಂತಹ ಸಲ್ಲು ಇದೀಗ ಮಹತ್ವದ ಸಾಧನೆಯೊಂದನ್ನು ಮಾಡಿದ್ದಾರೆ. ಅವರು ಕೇವಲ 8 ಗಂಟೆಗಳಲ್ಲಿ 8 ಕೋಟಿ ರು. ಗಳಿಸಿದ್ದಾರೆ. ಕಮರ್ಷಿಯಲ್ ಜಾಹೀರಾತೊಂದಕ್ಕೆ ಕ್ರಿಕೆಟಿಗ ಯುವರಾಜ್ ಸಿಂಗ್ ಆಯ್ಕೆಯಾಗಿದ್ದರು. ಆದರೆ ಅನಾರೋಗ್ಯದ ನಿಮಿತ್ತ ಅವರು ಗೈರು ಹಾಜರಾಗಿದ್ದರಿಂದ ಆ ಜಾಗಕ್ಕೆ ಸಲ್ಮಾನ್ ಖಾನ್ ಬಂದರು. ಕಡಿಮೆ ಸಂಭಾವನೆಗೆ ಒಪ್ಪದ ಸಲ್ಲು ಬರೋಬ್ಬರಿ 8 ಕೋಟಿ ರು. ಗಳನ್ನು ಜೇಬಿಗಿಳಿಸಿದ್ದಾರೆ.

  ಇದೀಗ ಚಾನೆಲ್ ಗಳು ಹಾಗೂ ವಾಣಿಜ್ಯ ಜಾಹೀರಾತುಗಳ ಬ್ರಾಂಡ್ ಅಂಬಾಸಡರ್ ಆಗಿ ಸಲ್ಲೂ ಬಾಯ್ ಬಹಳಷ್ಟು ಬ್ಯುಸಿ. ಕಾರಣ, ಅಲ್ಲಿ ಎಲ್ಲಾ ಕಡೆ ಸಲ್ಲು ಹವಾ ತುಂಬಾ ಜೋರಾಗಿದೆ. ಹಾಟ್ ಫೇವರೇಟ್ ಅನಿಸಿಕೊಂಡಿರುವ ಸಲ್ಲು, ಅದೆಷ್ಟೇ ಕೋಟಿ ಬೇಡಿಕೆಯಿಟ್ಟರೂ ಕೊಡಲು ಕಂಪೆನಿಗಳು ಹಾಗೂ ಚಾನಲ್ ಗಳು ಸಿದ್ಧವಾಗಿವೆ. ಒಟ್ಟಿನಲ್ಲಿ ಸಲ್ಲೂ ಜೈ ಹೋ ಅನ್ನದೇ ಬೇರೆ ದಾರಿಯಿಲ್ಲ. (ಏಜೆನ್ಸೀಸ್ )

  English summary
  Salman Khan gets eight crores in eight hours after he replaced cricketer Yuvraj Singh as a brand ambassador for a commercial.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X