ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ನಟ ಸಲ್ಮಾನ್ ಖಾನ್
ಇಷ್ಟು ದಿನ ಚಿತ್ರರಂಗದಲ್ಲಿ ಬಣ್ಣ ಹಚ್ಚಿ ಕುಣಿದಾಡುತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಕೈಹಾಕಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಆಸ್ತಿಯನ್ನು ಕೊಳ್ಳಲು ನಿರ್ಧರಿಸಿದ್ದು ಸೀರಿಯಸ್ ಆಗಿ ರಿಯಲ್ ಎಸ್ಟೇಟ್ ವ್ಯಾಪಾರ ಶುರುವಚ್ಚಿಕೊಳ್ಳಲು ಮುಂದಾಗಿದ್ದಾರೆ.
ದಬಾಂಗ್, ಬಾಡಿಗಾರ್ಡ್ ಚಿತ್ರಗಳು ಬಾಕ್ಸಾಫೀಸ್ ಉಡ್ಡೀಸ್ ಮಾಡಿದ ಮೇಲೆ ಸಲ್ಲುಗೆ ಲಕ್ಷ್ಮಿ ಕೃಪಾಕಟಾಕ್ಷ ಒಲಿದಿತ್ತು. ಒಂಚೂರು ಹಣ ಝಣ ಝಣ ಅನ್ನುತ್ತಿದ್ದಂತೆ ಎಲ್ಲಿ ಹಣ ಹೂಡಬೇಕು ಎಂದು ಸಲ್ಲು ತಲೆಕೆಡಿಸಿಕೊಂಡಿದ್ದಾರೆ. ಕಡೆಗೆ ಅವರಿಗೆ ಹೊಳೆದ ಐಡಿಯಾ ರಿಯಲ್ ಎಸ್ಟೇಟ್.
ಸದ್ಯಕ್ಕೆ 'ಏಕ್ತಾ ಟೈಗರ್' ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿಂದ ಮುಂಬೈಗೆ ಹಿಂತಿರುಗಿದ ಬಳಿಕ ತಮ್ಮ 'ರಿಯಲ್' ಗೆಳೆಯರೊಂದಿಗೆ ಚರ್ಚಿಸಿ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಹಣ ಹೂಡಲಿದ್ದಾರೆ. ರಿಯಲ್ ಎಸ್ಟೇಟ್‌ನಲ್ಲಿ ಹಣ ತೊಡಗಿಸಿದರೆ ಲಾಭ ಗ್ಯಾರಂಟಿ ಎಂಬುದು ಸಲ್ಲುಗೆ ಗೊತ್ತಾಗಿದೆಯಂತೆ. (ಏಜೆನ್ಸೀಸ್)
More from Filmibeat
English summary
Salman Khan reportedly wants to buy a property in Bandra, Mumbai, as he is seriously considering investing in real estate. Even though Salman Khan already owns a house in Bandstand, Mumbai, the actor is contemplating investing in property as he thinks that real estate is the best bet to invest rather than anything else.


Click it and Unblock the Notifications











