ಹದಿನೆಂಟು ವರ್ಷಗಳ ಬಳಿಕ ಶ್ರೀದೇವಿ ಜೊತೆ ಅಮಿತಾಬ್

By Rajendra

ಹದಿನೆಂಟು ವರ್ಷಗಳ ನಂತರ ಹಳೆಯ ತಾರಾಜೋಡಿ ಮತ್ತೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ. ಅವರು ಬೇರಾರು ಅಲ್ಲ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಮೋಹಕ ತಾರೆ ಶ್ರೀದೇವಿ. ಗೌರಿ ಶಿಂಧೆ ಆಕ್ಷನ್ ಕಟ್ ಹೇಳುತ್ತಿರುವ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರೀಕರಣದಲ್ಲಿ ಶ್ರೀದೇವಿ ಅಭಿನಯಿಸುತ್ತ್ತಿದ್ದಾರೆ.

ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ತೀರಾ ಇತ್ತೀಚೆಗೆ ಬಿಗ್ ಬಿ ಚಿತ್ರತಂಡಕ್ಕೆ ಸೇರ್ಪಡೆಯಾದರು. ಚಿತ್ರದಲ್ಲಿ ಶ್ರೀದೇವಿ ಗೃಹಿಣಿಯಾಗಿ ಕಾಣಿಸುತ್ತಿದ್ದು ತನ್ನ ಹೈ ಪ್ರೊಪೈಲ್ ಗಂಡನೊಡನೆ ಸರಿಸಮನಾಗಿ ಹೊಂದಾಣಿಕೆಯಾಗಲು ಇಂಗ್ಲಿಷ್ ಕಲಿಯುತ್ತಾಳೆ.

ಈ ಚಿತ್ರದಲ್ಲಿ ಅಮಿತಾಬ್ ಅವರದು ಸಣ್ಣ ಪಾತ್ರವಂತೆ. ಶ್ರೀದೇವಿ ವಿಮಾನದಲ್ಲಿ ಪ್ರಯಾಣಿಸುತ್ತಿರಬೇಕಾದರೆ ಸಹ ಪ್ರಯಾಣಿಕನಾಗಿ ಬಿಗ್ ಬಿ ಪರಿಚಯವಾಗುತ್ತಾನೆ. ಈ ಬಗ್ಗೆ ಬಚ್ಚನ್ ಟ್ವೀಟ್ ಮಾಡಿದ್ದು, ಸುದೀರ್ಘ ಸಮಯದ ನಂತರ ಶ್ರೀದೇವಿ ಜೊತೆ ಅಭಿನಯಿಸುತ್ತಿದ್ದೇನೆ. ಈಗಲೂ ಅಷ್ಟೇ ಸಹಜ ಹಾಗೂ ಸುಂದರವಾಗಿದ್ದಾರೆ ಎಂದಿದ್ದಾರೆ.

ಅಮಿತಾಬ್ ಮತ್ತು ಶ್ರೀದೇವಿ ಜೊತೆಯಾಗಿ ಅಭಿನಯಿಸಿದ ಕೊನೆಯ ಹಿಂದಿ ಚಿತ್ರ 'ಖುದಾ ಗವಾ'. ಈ ಹಿಂದೆ ಇವರಿಬ್ಬರು 'ಇಂಕ್ವಿಲಾಬ್' ಹಾಗೂ 'ಆಕ್ರಿ ರಾಸ್ತ' ಚಿತ್ರಗಳಲ್ಲಿ ಅಭಿನಯಿಸಿದ್ದರು. ಈಗ ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಈ ಜೋಡಿ ಪ್ರೇಕ್ಷಕರ ಮುಂದೆ ಬರುತ್ತಿದೆ. (ಏಜೆನ್ಸೀಸ್)

More from Filmibeat

English summary
Highly adorable couple of Bollywood, Amitabh Bachchan and Sridevi are shooting after 18 long years. Sridevi was shooting for quite some days while Big B joined her on the set of Gauri Shinde’s film, 'English Vinglish' only yesterday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X