ವಿದ್ಯಾ ಬಾಲನ್ ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ
ನಟಿ ವಿದ್ಯಾಬಾಲನ್ ತಮ್ಮ ಮಹತ್ವಾಕಾಂಕ್ಷಿ ಚಿತ್ರ 'ದಿ ಡರ್ಟಿ ಪಿಕ್ಚರ್'ನಲ್ಲಿ ಯರ್‍ರಾ ಬಿರ್ರಿಯಾಗಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿನ ಕೆಲವು ದೃಶ್ಯಗಳು ಪಡ್ಡೆಗಳ ಪಾಲಿಗೆ ವಯಾಗ್ರ ಗುಳಿಗೆಯಾಗಲಿವೆ. ಆದರೆ ವಿದ್ಯಾ ಬಾಲನ್ ಬಾಯ್ ಫ್ರೆಂಡ್ ಸಿದ್ದಾರ್ಥ್ ರಾಯ್ ಕಪೂರ್ ಮಾತ್ರ ಆಕೆಯ ಮೇಲೆ ಗರಂ ಆಗಿದ್ದಾರೆ.
ಈ ರೀತಿಯ ದೃಶ್ಯಗಳಲ್ಲಿ ಅಭಿನಯಿಸಬಾರದಿತ್ತು. ನಿನ್ನ ಇಮೇಜ್ ಹಾಳಗುತ್ತದೆ ಎಂದು ಬೇಸರಿಸಿಕೊಂಡಿದ್ದಾನೆ. 'ದಿ ಡರ್ಟಿ ಪಿಕ್ಚರ್'ನಲ್ಲಿ ವಿದ್ಯಾ ಮೈಚಳಿ ಬಿಟ್ಟು ಅಭಿನಯಿಸಿದ್ದಾರೆ. ಅದರಲ್ಲೂ ಇಮ್ರಾನ್ ಹಸ್ಮಿ ಹಾಗೂ ತುಷಾರ್ ಕಪೂರ್ ಜತೆಗಿನ ಹಾಟ್ ದೃಶ್ಯಗಳಂತೂ ಯಾವುದೇ ಕಾಮಪ್ರಚೋದಕ ಚಿತ್ರಕ್ಕಿಂತಲೂ ಕಮ್ಮಿ ಇಲ್ಲ ಎಂಬಂತಿವೆ.
ಆದರೆ ಈ ದೃಶ್ಯಗಳಿಗೆ ಯಾವುದೇ ಕಾರಣಕ್ಕೂ ಕತ್ತರಿ ಹಾಕುವುದಿಲ್ಲ ಎಂದು ಚಿತ್ರದ ನಿರ್ದೇಶಕ ಮಿಲನ್ ಲೂಥ್‌ರಿಯಾ ದೃಢನಿಶ್ಚಯ ಮಾಡಿದ್ದಾರೆ. ಚಿತ್ರದಲ್ಲಿನ ಕಿಸ್ಸಿಂಗ್ ದೃಶ್ಯಗಳಿಗಾದರೂ ಕತ್ತರಿ ಹಾಕುವಂತೆ ವಿದ್ಯಾ ಬಾಯ್‌ಫ್ರೆಂಡ್ ವಿನಂತಿಸಿಕೊಂಡಿದ್ದಾರೆ. ಆದರೆ ನಿರ್ದೇಶಕರು ಸುತಾರಾಂ ಒಪ್ಪಿಲ್ಲ. ವಿದ್ಯಾರ ಪರ್ಸನಲ್ ಲೈಫ್‌ಗೆ ಇದರಿಂದೇನು ತೊಂದರೆ ಆಗಲ್ಲ ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











