ಸಚಿನ್, ಅಮೀರ್ ಖಾನ್ ನೆರೆಹೊರೆಯವರಾಗಲಿದ್ದಾರೆ

By Rajendra

Sachin, Aamir Khan
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮುಂಬೈ ನಿವಾಸದ ಪಕ್ಕಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಶಿಫ್ಟ್ ಆಗಲಿದ್ದಾರೆ. ಸಚಿನ್ ಅಕ್ಕಪಕ್ಕದಲ್ಲಿ ಯಾವುದಾದರೂ ಮನೆ ಸಿಕ್ಕಿದರೆ ಕೊಂಡುಕೊಳ್ಳಲು ಅಮೀರ್ ಪ್ರಯತ್ನಿಸುತ್ತಿದ್ದಾರೆ. ಬಾಂದ್ರಾದಲ್ಲಿರುವ ಸಚಿನ್ ಮನೆಯ ಅಕ್ಕಪಕ್ಕ ಯಾವುದಾದರೂ ಫ್ಲಾಟ್‌ಗಳಿವೆಯೇ ಎಂದು ಅಮೀರ್ ತೀವ್ರ ಹುಡುಕಾಟ ನಡೆಸಿದ್ದಾರೆ.

ಸಚಿನ್ ಮನೆಯ ಸಮೀಪದಲ್ಲೇ ಹೊಸ ಬಂಗಲೆ ಕಟ್ಟಿಸಬೇಕು ಎಂದೇನು ಇಲ್ಲವಂತೆ ಅಮೀರ್‌ಗೆ. ಹಳೆಯದಾದರೂ ಪರ್ವಾಗಿಲ್ಲ. ಅದನ್ನೇ ನವೀಕರಿಸುವ ಇರಾದೆ ಅವರಿಗಿದೆಯಂತೆ. 2008ರಿಂದಲೂ ಹುಡುಕುತ್ತಿದ್ದಾರಂತೆ. ಆದರೆ ಇದುವರೆಗೂ ಅವರ ಬಯಕೆಯ ಮನೆ ಸಿಕ್ಕಿಲ್ಲ.

ಸದ್ಯಕ್ಕೆ ಅಮೀರ್ ವಾಸಿಸುತ್ತಿರುವ ಮನೆ ಅಷ್ಟೇನು ದೊಡ್ಡದಾಗಿಲ್ಲ. ಇನ್ನೂ ವಿಶಾಲವಾದ ಮನೆ ಕಟ್ಟಬೇಕೆಂದುಕೊಂಡಿದ್ದಾರೆ. ಅದೂ ಸಚಿನ್ ಇರುವ ಪ್ರದೇಶದಲ್ಲೇ ಎನ್ನಲಾಗಿದೆ. ಮನೆ ಕಮ್ ಆಫೀಸ್ ಎರಡೂ ಒಂದೇ ಕಡೆ ಇದ್ದರೆ ಚೆಂದ ಎಂಬುದು ಅವರ ಉದ್ದೇಶ. ಈ ಕೊಂಡಿ ಕ್ಲಿಕ್ಕಿಸಿದರೆ ಅವರ ಕನಸು ನೆರವೇರಬಹುದು. (ಏಜೆನ್ಸೀಸ್)

More from Filmibeat

English summary
Soon Aamir Khan and master blaster Sachin Tendulkar to become neighbors. Aamir looking for a house near Sachin Tendulkar's new house in Mumbai Bandra area.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X