ನಟಿ ಪೂನಮ್ ಗೆ ಚಳ್ಳೆಹಣ್ಣು ತಿನ್ನಿಸಿದ ಡ್ರೈವರ್
ಆ ಬ್ಯಾಗ್ ನಲ್ಲಿ ಏನಿತ್ತು ಎಂದು ಹೇಳದಿದ್ದರೆ ಅಷ್ಟು ರೊಕ್ಕ ಉಳಿತ್ತಿತ್ತೋ ಏನೋ ಆದರೆ, ಬ್ಯಾಗ್ ನಲ್ಲಿ ಇಷ್ಟು ದುಡ್ಡಿದೆ ಇಂಥವರಿಗೆ ಕೊಟ್ಟು ಬಿಡು ಎಂದು ತನ್ನ ಡ್ರೈವರ್ ಗೆ ಹೇಳಿದ ನಟಿಮಣಿ ಈಗ ತಲೆ ಮೇಲೆ ಕೈ ಹೊತ್ತು ಕೂತಿದ್ದಾಳೆ.
ಬಾಲಿವುಡ್ ನಟಿ ಕಮ್ ಗಾಯಕಿ ಪೂನಮ್ ಜಾವರ್ ಅವರ ಚಾಲಕಿ ಚಾಲಕ ಆಕೆ ನೀಡಿದ್ದ 3.9 ಲಕ್ಷ ರೂ ಇದ್ದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಕಳೆದ ವಾರ ಪೂನಮ್ ದೆಹಲಿಗೆ ಹೋಗಬೇಕಾಗಿತ್ತು. ಚಾಲಕ ಪೂರಬ್ ಸಿಂಗ್ ಥಾಪಾಗೆ ಏರ್ ಪೋರ್ಟ್ ತನಕ ಡ್ರಾಪ್ ಮಾಡೋಕೆ ಪೂನಮ್ ಹೇಳಿದಳು.
ಏರ್ ಪೋರ್ಟ್ ಗೆ ಹೋದ ಮೇಲೆ ತನ್ನ ಸ್ನೇಹಿತರೊಬ್ಬರಿಗೆ ತುರ್ತಾಗಿ ಹಣ ಕೊಡಬೇಕಾಗಿರುವ ವಿಷಯ ಪೂನಮ್ ನೆನಪಿಗೆ ಬಂದಿದೆ. 3.9 ಲಕ್ಷ ರೂ ಡ್ರೈವರ್ ಕೈಗಿತ್ತು ತನ್ನ ಅಮ್ಮ ನಿಗೆ ಕೊಡುವಂತೆ ಸೂಚಿಸಿದ್ದಾಳೆ.
ಆದರೆ, ಬುದ್ಧಿವಂತ ಚಾಲಕ ವರ್ಸೋವಾ ಬಳಿ ಕಾರು ಬಿಟ್ಟು, ಹಣ ತೆಗೆದುಕೊಂಡು ಪರಾರಿಯಾಗಿದ್ದಾನೆ. ದೆಹಲಿ ತಲುಪಿದ ಮೇಲೆ ತನ್ನ ತಾಯಿಗೆ ಕರೆ ಮಾಡಿ ಹಣ ತಲುಪಿದ್ಯಾ ಎಂದು ಕೇಳಿದ ಪೂನಮ್ ಗೆ ಶಾಕ್ ಆಗಿದೆ.
ತಕ್ಷಣವೇ ಪೊಲೀಸರಿಗೆ ದೂರಿತ್ತಿದ್ದಾಳೆ. ಮುಂಬೈನ ಓಶಿವಾರ ಪೊಲೀಸರು ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಥಾಪಾಗಾಗಿ ಹುಡುಕಾಟ ನಡೆಸಿದ್ದಾರೆ.


Click it and Unblock the Notifications











