ಆಂಧ್ರ ಪ್ರದೇಶ ಹೈಕೋರ್ಟ್ ನಲ್ಲಿ 'ಡರ್ಟಿ' ವಿದ್ಯಾ ಬಾಲನ್

'ದಿ ಡರ್ಟಿ ಪಿಕ್ಚರ್' ನಲ್ಲಿ ಬಹಳಷ್ಟು ಬಾಲಿವುಡ್ ಹೀರೋಗಳಿಗೂ ಸಿಗದಿದ್ದ ಓಪನಿಂಗ್ ಪಡೆದಿರುವ ವಿದ್ಯಾ ಬಾಲನ್, ಇದೀಗ ಹೊಸ ಹಾಟ್ ಸೆನ್ಸೇಷನ್. ದೇಶದ ಗಡಿ ದಾಟಿರುವ ಈಕೆಯ ಜನಪ್ರಿಯತೆ ಈಗ ಹೇಗಿದೆ ಎಂದರೆ ವಿದ್ಯಾ ಕುಂತರೂ ನಿಂತರೂ ಅಲ್ಲ, ಉಸಿರಾಟವೂ ಸುದ್ದಿ ಎಂಬಂತಾಗಿದೆ. ಮುಂದಿದೆ ನೋಡಿ ಹೊಸಸುದ್ದಿ.

ನಿನ್ನೆ ಹೈದ್ರಾಬಾದ್ ಗೆ ಬಂದಿದ್ದ ವಿದ್ಯಾ ನೋಡಿ ತೆಲುಗು ಪಡ್ಡೆಗಳು ಉಕ್ಕಿರಿ ಬಿಕ್ಕಿರಿ. ಹೈದ್ರಾಬಾದ್ ನ 'ನಲ್ಲಕುಂಟ' ಪೊಲೀಸ್ ಸ್ಟೇಷನ್ ನಲ್ಲಿ ತಮ್ಮ ವಿರುದ್ಧ ದಾಖಲಿಸಲಾಗಿದ್ದ ಖಾಸಗಿ ದೂರಿಗೆ ತಡೆಯಾಜ್ಞೆ ಕೋರಿ ಮನವಿ ಸಲ್ಲಿಸಲು ವಿದ್ಯಾ ಬಾಲನ್ ಆಂಧ್ರ ಪ್ರದೇಶದ ಹೈಕೋರ್ಟ್ ಗೆ ಹೋಗಿದ್ದರು.

ಮೊದಲೇ ಪೊಲೀಸ್ ಸ್ಟೇಷನ್ ಅಕ್ಕ-ಪಕ್ಕ ಸುದ್ದಿ ಹಬ್ಬಿತ್ತಾದ್ದರಿಂದ ವಿದ್ಯಾ ಬಾಲನ್ ನೋಡಲು ಜನ ಮುಗಿಬಿದ್ದಿದ್ದರು. ಸ್ಮೈಲ್ ಪ್ಲೀಸ್ ಅನ್ನುವ ಮೊದಲೇ ನಗುತ್ತಿದ್ದ ವಿದ್ಯಾ ನೋಡಿ ನೆರೆದವರ ಹರ್ಷ ಮುಗಿಲು ಮುಟ್ಟಿತ್ತು. ಪಡ್ಡೆಗಳ ಬಾಯಿಗೆ ಬಿಸಿ ಹೋಳಿಗೆಯಂತಾದ ವಿದ್ಯಾ ಹೈದ್ರಾಬಾದ್ ನಿಂದ ವಾಪಸ್ಸಾದರೂ ಅಲ್ಲಿ ಜನ ಆಕೆಯ ಬಗ್ಗೆ ಮಾತುನಾಡುವುದು ಇನ್ನೂ ನಿಂತಿಲ್ಲ. (ಏಜೆನ್ಸೀಸ್)

More from Filmibeat

English summary
Bollywood actress Vidya Balan filed a petition in the AP High Court on Wednesday seeking stay on further proceedings in a case filed against her in the Nallakunta police station in Hyderabad following a private complaint.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X