For Quick Alerts
  ALLOW NOTIFICATIONS  
  For Daily Alerts

  ನರೇಂದ್ರ ಮೋದಿಗೆ ನಟ ಅಕ್ಷಯ್ ಕುಮಾರ್ ಸಪೋರ್ಟ್

  By Rajendra
  |

  ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಭೇಟಿ ಮಾಡಿ ಕೈಕುಲುಕಿದ್ದಾರೆ. ತಮ್ಮ ಮುಂದಿನ ಚಿತ್ರ 'ದೇಸಿ ಬಾಯ್ಸ್' ಪ್ರಚಾರದ ಭಾಗವಾಗಿ ಅವರು ಮೋದಿಯನ್ನು ಭೇಟಿ ಮಾಡಿದರು.

  ಗುಜರಾತ್‍‌ನಲ್ಲಿ ನಡೆಯುತ್ತಿರುವ 'ಖೇಲ್ ಮಹಾಕುಂಭ-2011' ಕ್ರೀಡಾ ಉತ್ಸವಕ್ಕೆ ತಮ್ಮ ಬೆಂಬಲವನ್ನು ಸೂಚಿಸಿರುವ ಅಕ್ಷಯ್, ಮಾರ್ಷಲ್ ಆರ್ಟ್ಸ್ ಬಗೆಗೆ ತಮ್ಮ ಚಿತ್ರ 'ದೇಸಿ ಬಾಯ್ಸ್' ಬೆಳಕು ಚೆಲ್ಲಲಿದೆ ಎಂದಿದ್ದಾರೆ. ಗುಜರಾತ್ ಕ್ರೀಡಾ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು.

  "ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಕ್ರೀಡೆಗಳ ಬಗೆಗಿನ ಸರ್ಕಾರದ ಕಳಕಳಿ ನಿಜಕ್ಕೂ ಅಭಿನಂದನೀಯ " ಎಂದಿದ್ದಾರೆ ಅಕ್ಷಯ್ ಕುಮಾರ್. ಅಕ್ಕಿಯ ಅಭಿಮಾನಕ್ಕೆ ಮೋದಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

  English summary
  Actor Akshay Kumar, who is busy promoting his upcoming movie Desi Boyz, met Gujarat Chief Minister Narendra Modi yesterday. During his courtesy visit, the Bollywood hunk has assured his support to the sport events 'Khel Mahakumbh-2011,' which is organised by the state government.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X