ಐಟಂ ಸಾಂಗ್‌ನಲ್ಲೇ ಕೊಲ್ಲಲು ಬರುತ್ತಿದ್ದಾಳೆ ಬಿಪಾಶಾ ಬಸು

By Rajendra

ಬಾಲಿವುಡ್ ತಾರೆ ಬಿಪಶಾ ಬಸು ಅವರ ಅಭಿಮಾನಿಗಳು ಹಾಗೂ ಆರಾಧಕರಿಗೆ ಒಂದು ಸಂತಸದ ಸುದ್ದಿ. ಕತ್ರಿನಾ ಕೈಫ್, ಮಲ್ಲಿಕಾ ಅರೋರಾ ಮತ್ತು ದೀಪಿಕಾ ಪಡುಕೋಣೆ ಮೈಚಳಿ ಬಿಟ್ಟು ಕುಣಿದ ಮೇಲೆ ಈಗ ಬಿಪಶಾ ಬಸು ಕೂಡ ತಾನೇನು ಕಮ್ಮಿ ಎಂಬಂತೆ ಐಟಂ ಸಾಂಗ್‌ ಮಾಡಲು ಮುಂದಾಗಿದ್ದಾರೆ. ತಮ್ಮ ಮುಂದಿನ 'ಮರ್ಡರ್ 2' ಚಿತ್ರದಲ್ಲಿ ಬಿಪಾಶಾ ಪಡ್ಡೆಗಳಿಗೆ ರಸದೌತಣ ನೀಡಲಿದ್ದಾರೆ.

'ಮರ್ಡರ್ 2' ಚಿತ್ರದಲ್ಲಿ ತಾವು ಐಟಂ ಸಾಂಗ್ ಮಾಡುವುದಾಗಿ ಈಗಾಗಲೆ ಬಿಪಾಶಾ ನಿರ್ಮಾಪಕರನ್ನು ಸಂಪರ್ಕಿಸಿದ್ದಾರಂತೆ. ಬಿಪಾಶಾ ಅವರಿಗೆಂದೇ ವಿಶೇಷ ಹಾಡನ್ನು ರೂಪಿಸುತ್ತಿರುವುದಾಗಿ ನಿರ್ಮಾಪಕರೂ ಅಭಯ ಹಸ್ತ ನೀಡಿದ್ದಾರೆ. ಆದರೆ ಐಟಂ ಹಾಡಿಗೆ ಡೇಟ್ಸ್ ಹೊಂದಾಣಿಕೆಯಾಗುವುದು ಕೊಂಚ ತಡವಾಗಬಹುದು ಎನ್ನುತ್ತವೆ ಮೂಲಗಳು.

ಹೇಗಾದರೂ ಮಾಡಿ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ಆದಷ್ಟು ಬೇಗ ಐಟಂ ಹಾಡನ್ನು ಮುಗಿಸುವ ತರಾತುರಿಯಲ್ಲಿದ್ದಾರೆ ಬಿಪಾಶಾ. ರಾಜ್, ಜಿಸ್ಮ್, ಫುಟ್‌ಪಾತ್ ಮುಂತಾದ ಚಿತ್ರಗಳಲ್ಲಿ ಬಿಪಾಶಾ ಈಗಾಗಲೆ ತಮ್ಮ ಮೈಮಾಟವನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕಿದ್ದರು. 'ಮರ್ಡರ್' ಚಿತ್ರದ ಮುಖ್ಯ ಪಾತ್ರಧಾರಿಗಳಾದ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಇಮ್ರಾನ್ ಹಸ್ಮಿ ಭಾಗ 2ರಲ್ಲೂ ಇರುತ್ತಾರೆ. ಜೂನ್ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ.

More from Filmibeat

English summary
There is a good news in store for Bipasha Basu fans and freaks of the item song! After Mallika Arora, Katrina Kaif and Deepika Padukone, now Bipasha Basu is all set to do the same in upcoming Bollywood film Murder 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X