»   » ರೆಸ್ಟೋರೆಂಟ್‌ನಲ್ಲಿ ಬಾಯ್ ಫ್ರೆಂಡ್ ಜೊತೆ ಜೆನಿಲಿಯಾ

ರೆಸ್ಟೋರೆಂಟ್‌ನಲ್ಲಿ ಬಾಯ್ ಫ್ರೆಂಡ್ ಜೊತೆ ಜೆನಿಲಿಯಾ

Posted By:
Subscribe to Filmibeat Kannada

'ಸತ್ಯ ಇನ್ ಲವ್' ಎಂದು ಕನ್ನಡಕ್ಕೆ ಅಡಿಯಿಟ್ಟಿದ್ದ ಬಾಲಿವುಡ್ ತಾರೆ ಜೆನಿಲಿಯಾ ಬಾಯ್ ಫ್ರೆಂಡ್ ಜೊತೆ ಮಧ್ಯರಾತ್ರಿ ಸಿಕ್ಕಿಬಿದ್ದಿದ್ದಾರೆ. ಅದೂ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಎಂಬುದು ವಿಶೇಷ.ತಮ್ಮ ಹಳೆಯ ಗೆಳೆಯ ರಿತೇಶ್ ದೇಶ್ ಮುಖ್ ಅವರೊಂದಿಗೆ ರೆಸ್ಟೋರೆಂಟ್‌ನಲ್ಲಿ ರಾತ್ರಿಯಲ್ಲಾ ಕಳೆದದ್ದಾಗಿ ಬಾಲಿವುಡ್‌ನಲ್ಲಿ ಗುಲ್ಲೋ ಗುಲ್ಲು.

ತಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಹೇಳಿಕೊಂಡು ತಿರುಗುತ್ತಿದ್ದ ಇವರು ಮಧ್ಯರಾತ್ರಿ ರೆಸ್ಟೋರೆಂಟ್‌ಗೆ ಜೊತೆಯಾಗಿಯೇ ಬಂದಿದ್ದಾರೆ. ಬಳಿಕ ಇಬ್ಬರೂ ಒಟ್ಟಿಗೆ ಕೂತು ರಾತ್ರಿ ಭೋಜನ ಮಾಡಿರುವುದಾಗಿ ಬಾಲಿವುಡ್ ಮೂಲಗಳು ತಿಳಿಸಿವೆ. ಜಾಕ್ವೆಲಿನ್ ಫರ್ನಾಂಡೀಸ್ ಹಿಂದೆ ರಿತೇಶ್ ಬಿದ್ದಿದ್ದಾನೆ ಎಂಬ ಸುದ್ದಿಯೂ ಚಾಲ್ತಿಯಲ್ಲಿದೆ.

ಒಟ್ಟಿನಲ್ಲಿ ಜೆನಿಲಿಯಾ ಮತ್ತ್ತು ರಿತೇಶ್ ಕೇವಲ ಗೆಳೆಯರಷ್ಟೇ ಅಲ್ಲ. ಅವರಿಬ್ಬರ ನಡುವೆ ಬೇರೆಯದೇ ಸಂಬಂಧವಿದೆ ಎಂಬ ಮಾತುಗಳಿಗೂ ರೆಕ್ಕೆ ಪುಕ್ಕ ಮೂಡಿದೆ. ಆದರೆ ಇವರಿಬ್ಬರೂ ಏನಿಲ್ಲಾ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲಾ...ಎಂದು ಹಳೆರಾಗ ಹಾಡಿದರು ಆಶ್ಚರ್ಯಪಡಬೇಕಾಗಿಲ್ಲ.

English summary
Bollywood actress Genelia D’Souza caught with Bollywood actor Ritesh Deshmukh at a restaurant in Mumbai on Saturday night. Sources says that they had a great time together in the restaurant. They were entered the restaurant at around 12 am and were seen enjoying a scrumptious meal.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada