ಬೆಲ್ಲದಂಥ ಹುಡುಗಿ ಇಸೆಬೆಲ್ಲ ಏಕೆ ಯಾರಿಗೂ ಬೇಕಿಲ್ಲ?

By Mahesh

ನೋಡೋದ್ದಕ್ಕೆ ಕತ್ರೀನಾ ಕೈಫ್ ಗಿಂತ ಅಂದವಾಗೇ ಕಾಣುವ ಬೆಲ್ಲದಂಥ ಮೈಕಟ್ಟು ಉಳ್ಳ ಇಸೆಬೆಲ್ಲಾ ಯಾಕೋ ಯಾರಿಗೂ ಬೇಕಿಲ್ಲ. ಕತ್ರೀನಾ ಕೈಫ್ ತನ್ನ ತಂಗಿಯನ್ನು ಬಾಲಿವುಡ್ ಅಂಗಳದಲ್ಲಿ ಬೆಳೆಸಲು ಇನ್ನಿಲ್ಲದ್ದಂತೆ ಯತ್ನಿಸುತ್ತಿದ್ದಾರೆ ಆದ್ರೆ ಯಾರೂ ಕ್ಯಾರೆ ಎನ್ನುತ್ತಿಲ್ಲ ಏಕೆ ಹೀಗೆ?

ಕತ್ರೀನಾಳ ಪ್ರವೇಶಕ್ಕೆ ಮುಂಚೆ ಆದ ವಿಳಂಬ ನೀತಿಯನ್ನೇ ಇಸಬೆಲ್ಲಳಿಗೂ ಅನ್ವಯಿಸುತ್ತಿದೆ ಬಾಲಿವುಡ್. ಇದ್ದಕ್ಕಿದ್ದಂತೆ ಬಾಲಿವುಡ್ ಮಂದಿಗೆ ಭಾಷಾ ಪ್ರೇಮ ಜಾಗೃತವಾಗಿದೆ. ಹಿಂದಿ ತಿಳಿಯದ ಇಸೆಬೆಲ್ಲ ಮೊದಲಿಗೆ ಹಿಂದಿ ಡಿಕ್ಟೇಷನ್ ಪಡೆದು ಬರಲಿ ಎನ್ನುತ್ತಿದೆ ಬಾಲಿವುಡ್. ಆದರೆ ಅದು ಇನ್ನೂ ಕತ್ರೀನಾ ಕಿವಿಗೆ ಇನ್ನೂ ಬಿದ್ದಿಲ್ಲ. ಕನ್ನಡ ಚಿತ್ರರಂಗದಲ್ಲಾದರೆ ಈ ಸಮಸ್ಯೆಯಿಲ್ಲ ಪರಭಾಷೆ, ಪರವೂರು, ಪರದೇಶಿಗಳಿಗೆ ಇಲ್ಲಿ ಯಾವಾಗಲೂ ಮನ್ನಣೆ.

ಯಶ್ ರಾಜ್ ಫಿಲ್ಮಂ ಹಾಗೂ ಶಾರುಖ್ ಖಾನ್ ರೆಡ್ ಚಿಲ್ಲಿಸ್ ಪ್ರೊಡಕ್ಷನ್ ನಂತಹ ಬಿಗ್ ಬ್ಯಾನರ್ ಮೂಲಕ ತಂಗಿಗೆ ಒಳ್ಳೆ ಬ್ರೇಕ್ ನೀಡಲು ಕತ್ರೀನಾ ಯೋಜಿಸಿದ್ದಾಳೆ. ಸಲ್ಮಾನ್ ಮೇಲೆ ಏನೇ ಸಿಟ್ಟಿದ್ದರೂ ಇಸಬೆಲ್ಲಳನ್ನು ಕರಣ್ ಜೋಹರ್ ಗೆ ಶಾರುಖ್ ಪರಿಚಿಯ ಮಾಡಿಕೊಟ್ಟಿದ್ದಾನಂತೆ. ಹತ್ತಾರು ಪಾರ್ಟಿಗಳಲ್ಲಿ ಅಕ್ಕನ ಪಕ್ಕದಲ್ಲಿ ಇಸಬೆಲ್ಲ ಕಾಣಿಸಿಕೊಳ್ಳುತ್ತಿದ್ದಾಳೆ.

ಸುಮಾರು ಆರು ಜನ ಸೋದರಿಯರ ತುಂಬು ಕುಟುಂಬಕ್ಕೆ ಕತ್ರೀನಾ ಮಾದರಿಯಾಗುತ್ತಿದ್ದಾಳೆ. ತನ್ನಂತೆ ತಂಗಿ ಕೂಡಾ ಒಳ್ಳೆ ಅವಕಾಶ ಪಡೆಯಲಿ ಎಂದು ದಿನ ರಾತ್ರಿ ಯತ್ನಿಸುತ್ತಿದ್ದಾಳೆ. ಇಸಬೆಲ್ಲ ಹಿಂದಿ ತರಗತಿಗೂ ಸೇರಿದ್ದಾಳೆ ಎಂಬ ಸುದ್ದಿಯಿದೆ. ಶಾರುಖ್ ಅಥವಾ ಸಲ್ಮಾನ್ ಜೋಡಿಯಾಗಿ ನಟಿಸುವ ಕನಸು ಕಾಣುತ್ತಾ. ಮೈ ಕತ್ರೀನಾ ಬನ್ ನ ಚಹತಿ ಹೂಂ ಎಂದು ಇಸಬೆಲ್ಲ ರಾಗ ಎಳೆಯುತ್ತಿದ್ದಾಳಂತೆ.

More from Filmibeat

English summary
Katrina Kaif is looking for a suitable project to launch her sister Isabella. Katrina already in contact with Yash Raj Filmsand Shahrukh's Red Chillies Productions. Isbella also facing same problem lack of command over Hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X