ಭಾಗ್ ಮಿಲ್ಕಾ ಭಾಗ್ ಚಿತ್ರದಲ್ಲಿ ಪ್ರಕಾಶ್ ರೈಗೆ ಅವಕಾಶ
{image-22-prakash-raj(2).jpg kannada.filmibeat.com}ಪ್ರಮುಖ ಅಥ್ಲೀಟ್ ಮಿಲ್ಕಾ ಸಿಂಗ್ ಜೀವನ ಚರಿತ್ರೆ ಬೆಳ್ಳಿತೆರೆ ಮೇಲೆ ಮೂಡಿಬರಲಿದೆ. ಏಷ್ಯಾ ಕ್ರೀಡೆಗಳಲ್ಲಿ ಮಿಂಚಿ ಕೂದಲೆಳೆ ಅಂತರದಲ್ಲಿ ಒಲಂಪಿಕ್ಸ್ ಪದಕ ಕಳೆದುಕೊಂಡಿದ ಮಿಲ್ಕಾ ಸಿಂಗ್ ಕತೆ ಸಿನಿಮಾ ಆಗಲಿದೆ. ಮಿಲ್ಕಾ ಸಿಂಗ್ ಅವರನ್ನು ಪ್ರೀತಿಯಿಂದ The Flying Sikh ಎಂದು ಕರೆಯಲಾಗುತ್ತದೆ.
ಈ ಓಟದ ರಾಜನ ಕತೆಯನ್ನು ಬೆಳ್ಳಿತೆರೆಗೆ ತರುತ್ತಿದ್ದಾರೆ ನಿರ್ದೇಶಕ ರಾಕೇಶ್ ಮೆಹ್ರಾ. ಚಿತ್ರಕ್ಕೆ 'ಭಾಗ್ ಮಿಲ್ಕಾ ಭಾಗ್' ಎಂದು ಹೆಸರಿಡಲಾಗಿದೆ. ಈಗಾಗಲೆ ಮೆಹ್ರಾ ಅವರು ಮಿಲ್ಕಾ ಅವರನ್ನು ಭೇಟಿ ಮಾಡಿ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.
ತಮ್ಮ ಜೀವನ ಕತೆಯಾಧಾರಿತ ಚಿತ್ರಕ್ಕೆ ಮಿಲ್ಕಾ ಸಿಂಗ್ ಕೂಡ ಅನುಮತಿ ಕೊಟ್ಟಿದ್ದಾರೆ. ತಮ್ಮ ಕುರಿತು ತೆಗೆಯುತ್ತಿರುವ ಚಿತ್ರದ ಹಕ್ಕುಗಳಿಗೆ ಎಷ್ಟು ಕೊಡಬೇಕು ಎಂದರೆ, ಕೇವಲ ಒಂದೇ ಒಂದು ರೂಪಾಯಿ ಸಾಕು ಎಂದಿದ್ದಾರೆ ಮಿಲ್ಕಾ.
ಚಿತ್ರದಲ್ಲಿ ಗಮನಾರ್ಹವಾದ ಪಾತ್ರವನ್ನು ಪ್ರಕಾಶ್ ರೈ ಪೋಷಿಸಲಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕತೆಯನ್ನು ಪ್ರಕಾಶ್ ರೈ ಅವರೊಂದಿಗೂ ಚರ್ಚಿಸಲಾಗಿದೆ. ಮಿಲ್ಕಾ ಪಾತ್ರವನ್ನು ಫರಾನ್ ಅಖ್ತರ್ ಪೋಷಿಸುವ ಸಾಧ್ಯತೆಗಳಿವೆ. ಚಿತ್ರಕ್ಕೆ ಸಂಬಂಧಿಸಿದ ಉಳಿದ ವಿವರಗಳು ಇನ್ನಷ್ಟೇ ಹೊರಬೀಳಬೇಕು. (ಏಜೆನ್ಸೀಸ್)


Click it and Unblock the Notifications











