For Quick Alerts
  ALLOW NOTIFICATIONS  
  For Daily Alerts

  ಟಾಪ್ ನಾಯಕಿಯರ ಬಗ್ಗೆ ರೋಹಿತ್ ಕೆಂಡಾಮಂಡಲ

  |

  ನಿರ್ದೇಶಕ ರೋಹಿತ್ ಶೆಟ್ಟಿ ಗರಮ್ ಆಗಿದ್ದಾರೆ. ಕಾರಣ ಬಾಲಿವುಡ್ ನ ಮೂರು ಟಾಪ್ ನಾಯಕಿಯರು. ರೋಹಿತ್ ನಿರ್ದೇಶನದ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದಲ್ಲಿ ನಟಿಸುತ್ತಾರೆಂದು ಅನಾವಶ್ಯಕ ಹಬ್ಬಿರುವ ವದಂತಿಗೆ ಅವರು ಕೆಂಡಾಮಂಡಲ ಆಗಿದ್ದಾರೆ. ನಟಿಯರು ಆ ಚಿತ್ರಕ್ಕೆ ಸಹಿ ಮಾಡಿದ್ದಾರೆಂಬ ವದಂತಿಯನ್ನು ಅವರು ತಳ್ಳಿಹಾಕಿದ್ದಾರೆ.

  ಮೊದಲನೆಯದಾಗಿ "ನಟಿ ಕರೀನಾ ನಾನು ತುಂಬಾ ಇಷ್ಟಪಡುವ ನಟಿಯರಲ್ಲಿ ಒಬ್ಬರು. ಆದರೆ ನಾನು ಅವರನ್ನು ನನ್ನ ಮುಂದಿನ ಚಿತ್ರಕ್ಕಾಗಿ ಸಂಪರ್ಕಿಸಿಲ್ಲ. ಕಾರಣ ಅವರು ರಣವೀರ್ ಸಿಂಗ್ ನಾಯಕತ್ವದ ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ನಾನು ಕರೀನಾರನ್ನು ಸಂಪರ್ಕಿಸಿಯೂ ಇಲ್ಲ. ಅಷ್ಟಕ್ಕೂ, ನಾನು ನನ್ನ ಚಿತ್ರದ ನಾಯಕಿಯನ್ನು ಫೈನಲ್ ಮಾಡುವುದು ಏಪ್ರಿಲ್ ನಲ್ಲಿ" ಎಂದಿದ್ದಾರೆ.

  ಇನ್ನು ಆಸಿನ್ ಬಗ್ಗೆ ಹೇಳಬೇಕೆಂದರೆ "ನಾನು ಆಕೆಯ ಹೆಸರನ್ನು ಎಲ್ಲಿಯೂ ಹೇಳಿಲ್ಲ. ಸದ್ಯಕ್ಕೆ ನಾನು 'ಬೋಲ್ ಬಚ್ಚನ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇನೆ. ದೀಪಿಕಾ ಪಡುಕೋಣೆಯ ಬಗ್ಗೆ "ಸದ್ಯಕ್ಕೆ ನಾನು ಬೇರೆ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ. ದೀಪಕಾ ನನ್ನ ಚಿತ್ರದಲ್ಲಿ ನಟಿಸುತ್ತಾರೆಂದು ಅದ್ಯಾರು ಸುದ್ದಿ ಹಬ್ಬಿಸಿದರೋ ಗೊತ್ತಿಲ್ಲ. ಆಕೆಯನ್ನೂ ನಾನು ಸಂಪರ್ಕಿಸಿಲ್ಲ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸುವುದನ್ನು ನಿಲ್ಲಿಸಿ..." ಎಂದು ಛಾಟಿ ಬೀಸಿದ್ದಾರೆ ರೋಹಿತ್ (ಏಜೆನ್ಸೀಸ್ )

  English summary
  Rohit Shetty is fuming at three top actresses creating speculation that they are acting in his film Chennai Express, starring Shah Rukh Khan. And the ladies in the firing line are Kareena Kapoor, Deepika Padukone and Asin. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X