ಬಂಧನಕ್ಕೆ ಹೆದರಿ ಸೈಫ್ ಅಲಿ ಖಾನ್ ನಾಪತ್ತೆ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಇದೀಗ ನಾಪತ್ತೆಯಾಗಿದ್ದಾರೆ. ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಬಂಧನವಾಗುವ ಸಾಧ್ಯತೆ ದಟ್ಟವಾಗುತ್ತಿದ್ದಂತೆ ಸೈಫ್, ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಅವರ ಮನೆಗೆ ಹೋದ ಕೊಲಾಬಾ ಠಾಣೆ ಪೊಲೀಸರ ಕೈಗೆ ಸಿಗದೇ, ಸೈಫ್ ಚಳ್ಳೆಹಣ್ಣು ತಿನ್ನಿಸಿದ್ದಾರೆ.

ಕಾನೂನಿನಡಿ ಬಂಧನದ ಸಾಧ್ಯತೆಗೊಳಗಾಗಿರುವ ಸೈಫ್, ಇಕ್ಬಾಲ್ ಶರ್ಮಾ ಎಂಬವರಿಗೆ ಕೊಲಾಬಾ ಠಾಣೆ ವ್ಯಾಪ್ತಿಯಲ್ಲಿರುವ ತಾಜ್ ಸಮೀಪದ ವಾಸವಿ ರೆಸ್ಟೋರಂಟ್ ನಲ್ಲಿ ಗೆಳೆಯರ ಜೊತೆ ಊಟ ಮಾಡುತ್ತಿದ್ದ ಸೈಫ್ ಗೂಸಾ ಕೊಟ್ಟಿದ್ದರು. ಕಾನೂನಿಗೆ ವಿರುದ್ಧವಾಗಿ ಹಲ್ಲೆ ಮಾಡಿದ್ದಾರೆಂದು ಸೆಕ್ಷನ್ ನಂ. 325 ಅಡಿ ಸೈಫ್ ಮೇಲೆ ಕೇಸು ದಾಖಲಿಸಲಾಗಿದೆ.

ಇದೀಗ ಸೈಫ್ ಹುಡುಕಾಟದ ಕಾರ್ಯಾಚರಣೆ ತೀವ್ರವಾಗಿದ್ದು ಬಾಲಿವುಡ್ ಬಾನಿನಲ್ಲಿ ಆತಂಕದ ಛಾಯೆ ದಟ್ಟವಾಗಿದೆ. ಅವರ ಗೆಳತಿ ಕರೀನಾ, ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಸೈಫ್ ಆತ್ಮೀಯರು ಹಾಗೂ ಕುಟುಂಬವರ್ಗ ತೀವ್ರ ಆತಂಕಕ್ಕೊಳಗಾಗಿದೆ. ಒಟ್ಟಿನಲ್ಲಿ ಆರೋಪಿ ಸೈಫ್ ರನ್ನು ಹಿಡಿಯುವ ಕಾರ್ಯಾಚರಣೆ ತೀವ್ರಗೊಂಡಿದ್ದು ಸೈಫ್ ಜೈಲಿಗೆ ಹೋಗುವ ಸಾಧ್ಯತೆ ಕಂಡಬರುತ್ತಿದೆ. (ಏಜೆನ್ಸೀಸ್)

More from Filmibeat

English summary
Saif Ali Khan has been booked when a case of assault was registered against him. Saif allegedly punched a man named Iqbal Sharma at Wasabi restaurant at the Taj in Colaba. Now he Abscond from his home. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X