ಸೈಫ್ ವಿರುದ್ಧ ಹಲ್ಲೆ ಪ್ರಕರಣ, ಬಂಧನದ ಸಾಧ್ಯತೆ

ಬಾಲಿವುಡ್ ನಟ ಸೈಫ್ ಅಲಿ ಖಾನ್, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ. ಸೈಫ್ ಮೇಲೆ ಹಲ್ಲೆ ಪ್ರಕರಣ ದಾಖಲಿಸಿಕೊಂಡಿರುವ ಕೊಲಾಬಾ ಠಾಣೆ ಪೊಲೀಸರು ಇದೀಗ ಸೈಫ್ ಮನೆ ಸಮೀಪ ತೆರಳಿದ್ದಾರೆ. ದಿಢೀರ್ ಆದ ಈ ಬೆಳವಣಿಗೆಯಿಂದ ಸಹಜವಾಗಿ ಬಾಲಿವುಡ್ ಬೆರಗಾಗಿದೆ.

ಕಾನೂನಿನಡಿ ಬಂಧನದ ಸಾಧ್ಯತೆಗೊಳಗಾಗಿರುವ ಸೈಫ್, ಇಕ್ಬಾಲ್ ಶರ್ಮಾ ಎಂಬವರಿಗೆ ಕೊಲಾಬಾ ಠಾಣೆ ವ್ಯಾಪ್ತಿಯ ತಾಜ್ ಹೊಟೆಲ್ ನಲ್ಲಿರುವ ವಾಸವಿ ರೆಸಟ್ಓರಂಟ್ ನಲ್ಲಿ ಕಾನೂನಿಗೆ ವಿರುದ್ಧವಾಗಿ ಗೂಸಾ ಕೊಟ್ಟಿದ್ದರಂತೆ. ಆತನ ಮೂಗು ಮುರಿದಿದ್ದಲ್ಲದೇ ಸಾಕಷ್ಟು ಗಾಯಗೊಂಡಿದ್ದಾನೆಂದು ತಿಳಿದುಬಂದಿದೆ. ಘಟನೆ ನಡೆಯುವಾಗ ಸೈಫ್ ಆ ಹೊಟೆಲಿನಲ್ಲಿ ಗೆಳೆಯರ ಜೊತೆ ಊಟ ಮಾಡುತ್ತಿದ್ದರು.

ಘಟನೆಗೆ ಕಾರಣ ಸರಿಯಾಗಿ ತಿಳಿದಿಲ್ಲವಾದರೂ ಘಟನೆ ನಂತರ ಇಕ್ಬಾಲ್ ಶರ್ಮಾ, ಇನ್ನಿಬ್ಬರ ಜೊತೆ ಸೇರಿ ಸೈಫ್ ಅಲಿ ಖಾನ್ ವಿರುದ್ಧ ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆಕ್ಷನ್ ನಂ. 325 ಅಡಿ ಸೈಫ್ ಮೇಲೆ ಕೇಸು ದಾಖಲಾಗಿದೆ. ಇದೀಗ ಕೊಲಾಬಾ ಠಾಣೆಯ ಪೊಲೀಸರು ಸೈಫ್ ಮನೆಯತ್ತ ತೆರಳಿದ್ದಾರೆ. ಇನ್ನೇನು ಶೀಘ್ರದಲ್ಲೇ ಬಂಧನದ ಸಾಧ್ಯೆತೆಯಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

More from Filmibeat

English summary
Saif Ali Khan has been booked when a case of assault was registered against him. Saif allegedly punched a man named Iqbal Sharma at Wasabi restaurant at the Taj in Colaba. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X