ಮದುವೆ, ಮಕ್ಕಳು ಬೇಡವೆಂದ ಸಲ್ಮಾನ್ ಖಾನ್

ಇತ್ತೀಚಿಗೆ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಪುತ್ರ 'ಬಪ್ಪ'ರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಅಲ್ಲಿ ಬಂದಿದ್ದ ಹಿರಿಯ ಅತಿಥಿಯೊಬ್ಬರು ಮದುವೆ ಬೇಗ ಆಗಲಿ ಎಂದು ಹರಿಸಿದ್ದಾರೆ. ತಕ್ಷಣವೇ ಅವರನ್ನು ದುರುಗುಟ್ಟಿ ನೋಡಿದ ಸಲ್ಮಾನ್, "ನನಗೆ ಮದುವೆ,ಮಕ್ಕಳು ಎಂದೆಲ್ಲಾ ಆಶೀರ್ವಾದ ಮಾಡುವ ಬದಲು ಐಶ್ವರ್ಯ, ಆರೋಗ್ಯ ಹಾಗೂ ಯಶಸ್ಸು ಸಿಗಲಿ ಎಂದು ಆಶೀರ್ವದಿಸಿ" ಎಂದಿದ್ದಾರೆ.
ಪದೇ ಪದೇ ಭಗ್ನಪ್ರೇಮಿಯಾಗಿ ನೊಂದಿರುವ ಸಲ್ಮಾನ್ ಖಾನ್, ಮದುವೆ ಎಂಬ ಸಂದ್ರದಾಯದಲ್ಲಿ ನಂಬಿಕೆ ಕಳೆದುಕೊಂಡಿರಬೇಕು. ಅವರು ಜೀವನದಲ್ಲಿ ಮದುವೆಯಾಗುವ ಯೋಚನೆಯನ್ನೇ ಬಿಟ್ಟಂತಿದೆ. ಬಹುಶಃ ಒಂಟಿಯಾಗಿಯೇ ಇರುವ ಗಟ್ಟಿ ನಿರ್ಧಾರ ಸಲ್ಮಾನ್ ಖಾನ್ ಅವರದಾಗಿರಬೇಕು ಎನ್ನಲಾಗುತ್ತಿದೆ. ಆಲ್ ದಿ ಬೆಸ್ಟ್ ಸಲ್ಮಾನ್ ಎನ್ನುತ್ತಿದೆ ಬಾಲಿವುಡ್ ಹಾಗೂ ಅಭಿಮಾನಿ ಬಳಗ! (ಏಜೆನ್ಸೀಸ್)
More from Filmibeat
English summary
Salman Khan scared of marriage and wants to be single! During Bappi Lahiri's son Bappa's marriage party, Salman asked a guest to bless him with money,health and success instead of marriage and kids.


Click it and Unblock the Notifications











