ಸಂಜಯ್ ದತ್, ಮಾನ್ಯತಾಗೆ ಡಬಲ್ ಧಮಾಕಾ!
ಮುನ್ನಾಬಾಯ್ ಸಂಜಯ್ ದತ್ ಮತ್ತು ಮಾನ್ಯತಾ ದಂಪತಿಗಳಿಗೆ ಈಗ ಡಬಲ್ ಧಮಾಕಾ ಸಂಭ್ರಮ. ಕಾರಣ ಮಾನ್ಯತಾ ಒಂದು ಗಂಡು ಹಾಗೂ ಒಂದು ಹೆಣ್ಣು ಅವಳಿ ಜವಳಿಗಳನ್ನು ಗುರುವಾರ ಮಟ ಮಟ ಮಧ್ಯಾಹ್ನ (ಅ.21) ಹಡೆದಿದ್ದಾರೆ.
ಭರ್ತಿ ನವಮಾಸಗಳು ತುಂಬುವ ಒಂದು ತಿಂಗಳ ಮೊದಲೇ ಮಾನ್ಯತಾ ಮುದ್ದಾದ ಎರಡು ಕೂಸುಗಳನ್ನು ಸಂಜು ಕೈಗಿಟ್ಟಿದ್ದಾರೆ. ಮದುವೆಯಾದ ಎರಡು ವರ್ಷಗಳ ಬಳಿಕ ಮಾನ್ಯತಾಗೆ ತಾಯಿಯಾಗುವ ಸುಯೋಗ ಒದಗಿಬಂದಿದೆ. ಸಂಜುಗೆ ಈಗಾಗಲೆ ಅರ್ಧ ವಯಸ್ಸು ಮುಗಿದಿದ್ದು ಮಾನ್ಯತಾ ಮಾತ್ರ ಇನ್ನೂ ಹದಿಹರೆಯದ ಹೆಣ್ಣು. ಒಂದು ರೀತಿ ಇವರಿಬ್ಬರದ್ದೂ ಅಪರೂಪದ ದಾಂಪತ್ಯ.
ಮದುವೆ ವಯಸ್ಸಿಗೆ ಬಂದ ಹೆಣ್ಣು ಮಗಳು ಸಂಜುಗೆ ಇದ್ದಾಳೆ. ಹಾಗಾಗಿ ತನಗೆ ಇನ್ನೊಂದು ಹೆಣ್ಣು ಮಗು ಬೇಡ ಗಂಡು ಮಗು ಬೇಕು ಎಂದು ಸಂಜು ಆಸೆಪಟ್ಟಿದ್ದ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತಂತೆ ಭಗವಂತ ಎರಡನ್ನೂ ಕರುಣಿಸಿದ್ದಾನೆ.
ಸಂಜಯ್ ದತ್ ಮಾನ್ಯತಾ ಅವಳಿ ಜವಳಿ ಗರ್ಭಿಣಿ ಮುನ್ನಾಬಾಯ್ ಬಾಲಿವುಡ್ sanjay dutt manyaata pregnant munnabhai bollywood


Click it and Unblock the Notifications