For Quick Alerts
  ALLOW NOTIFICATIONS  
  For Daily Alerts

  ಗುಪ್ತ ಸ್ಥಳದಲ್ಲಿ ವಿವೇಕ್ ಒಬೆರಾಯ್ ಹಚ್ಚೆ

  By Rajendra
  |

  ಬಾಲಿವುಡ್ ತಾರೆಗಳಿಗೆ ಹಚ್ಚೆ ಹಾಕಿಸಿಕೊಳ್ಳುವ ಹುಚ್ಚು ಅತಿಹೆಚ್ಚು ಎಂದೇ ಹೇಳಬೇಕು. ಕೆಲವರು ಕೈ, ಕಾಲು, ತೋಳು, ಭುಜ, ಕೆನ್ನೆ ಮೇಲೆ ಹಚ್ಚೆ ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ. ಆದರೆ ನಮ್ಮ ವಿವೇಕ್ ಒಬೆರಾಯ್ ಅವರಿಗೂ ಈಗ ಹಚ್ಚೆ ಹಾಕಿಸಿಕೊಳ್ಳುವ ಖಯಾಲಿ ಶುರುವಾಗಿದೆ.

  ಈ ಹೊಸ ಐಡಿಯಾ ಅವರಿಗೆ ಹೊಳೆದದ್ದು ದೂರದ ಬಾಲಿ ದ್ವೀಪಗಳಲ್ಲಿ. ಸದ್ಯಕ್ಕೆ ಆತ ಪತ್ನಿ ಜೊತೆ ಬಾಲಿ ದ್ವ್ವೀಪಗಳಲ್ಲಿ ಜಾಲಿಯಾಗಿ ವಿಹರಿಸುತ್ತಿದ್ದಾರೆ ವಿವೇಕ್. ಧರ್ಮಪತ್ನಿ ಪ್ರಿಯಾಂಕಾ ಆಳ್ವ ಈಗಾಗಲೆ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು. ತಾನೂ ಯಾಕೆ ಹಾಕಿಸಿಕೊಳ್ಳಬಾರದು ಎಂಬ ಐಡಿಯಾ ವಿವೇಕ್‌ಗೆ ಬಂದಿದೆ.

  ಕೂಡಲೆ ಎಚ್ಚೆತ್ತುಕೊಂಡಿರುವ ಅವರು, ತಮ್ಮ ಮುಂದಿನ ಚಿತ್ರ 'ಜಿಲ್ಲಾ ಘಾಜಿಯಾಬಾದ್' ಹಾಗೂ 'ಕ್ರಿಷ್ 2' ಚಿತ್ರಗಳಲ್ಲಿ ಹಚ್ಚೆಯೊಂದಿಗೆ ಕಾಣಲು ಮುಂದಾಗಿದ್ದಾರೆ. ಈಗಾಗಲೆ ಅವರು ಲಾಸ್ ಏಂಜಲೀಸ್ ಹಾಗೂ ಮಿಯಾಮಿಯಿಂದ ನುರಿತ ಹಚ್ಚೆಗಾರನ್ನು ಕರೆಸಿಕೊಂಡಿದ್ದಾರಂತೆ. ಬಾಲಿ ದ್ವೀಪಗಳ ಸುತ್ತಮುತ್ತ ಎಲ್ಲೋ ಅಲ್ಲೇ ಗುಪ್ತ ಸ್ಥಳದಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

  English summary
  Bollywood actor Vivek Oberoi inking a tattoo on his body to surprise his wife Priyanka. He has decided on a cool design he discovered while holidaying in Bali with his wife but wants to improvise on it. Vivek is in Bali with Priyanka and is inquiring about the best tattoo artist around.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X