ಬೆಡಗಿ ಬಿಪಾಶಾ ಬಸು ಮಾಡಿಕೊಂಡ ದೊಡ್ಡ ಯಡವಟ್ಟು

By Rajendra

ಸುಮ್ಮನಿರಲಾರದೆ ಮೈಮೇಲೆ ಇರುವೆ ಬಿಟ್ಟುಕೊಂಡರು ಎಂಬಂತಾಗಿದೆ ಬಾಲಿವುಡ್ ತಾರೆ ಬಿಪಾಶಾ ಬಸು ಪರಿಸ್ಥಿತಿ. ಇಬ್ಬರು ಮಕ್ಕಳು ಶೂ ಲೇಸು ಕಟ್ಟುತ್ತಿರುವ ಚಿತ್ರವನ್ನು ಟ್ವಿಟ್ಟರ್‌ನ ತಮ್ಮ ಖಾತೆಗೆ ಹಾಕಿಕೊಂಡು ಈಕೆ ತಾವೇ ತಮ್ಮ ಕೈಯಾರೆ ಒಂದು ಯಡವಟ್ಟು ಮಾಡಿಕೊಂಡಿದ್ದಾರೆ. "I need to learn to tie shoe laces ASAP! Embarrassed that I can't! No patience grrrrr! Promise I am not spoilt! Will learn soon." ಎಂದು ಟ್ವೀಟ್ ಮಾಡಿ ಕೈತೊಳೆದುಕೊಂಡಿದ್ದಾರೆ.

ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಮತ್ತೊಂದು ತಿರುವು ಪಡೆದುಕೊಂಡು ಬಿಪಾಶಾ ಬಾಲ ಕಾರ್ಮಿಕರನ್ನು ಬಳಸಿಕೊಂಡಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. "ಚಿಕ್ಕ ಮಕ್ಕಳಿಂದ ಶೂ ಲೇಸು ಕಟ್ಟಿಸಿಕೊಂಡಿರುವ ಬಿಪಾಶಾ ಬಂಧನಕ್ಕೊಳಗಾಗುವ ಸಾಧ್ಯತೆಗಳು ಇವೆ. ಯಾವುದೇ ಸ್ಟುಡಿಯೋಗಳಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಳ್ಳುವಂತಿಲ್ಲ. " ಎಂದು ಹಿಂಬಾಲಕನೊಬ್ಬ ಮೊದಲೆ ಭಯದಿಂದ ತತ್ತರಿಸುದ್ದ ಬಿಪಾಶಾ ಮೇಲೆ ಹಗ್ಗ ಎಸೆದಿದ್ದಾನೆ.

ಕೂಡಲೆ ಎಚ್ಚೆತ್ತ್ತುಕೊಂಡ ಬಿಪಾಶಾ ಟ್ವಿಟ್ಟರ್‌ನಲ್ಲಿ ಹಾಕಿದ್ದ ಛಾಯಾಚಿತ್ರವನ್ನು ಡಿಲೀಟ್ ಮಾಡಿದ್ದಾರೆ. "ಟ್ವಿಟ್ಟರ್‌ನಲ್ಲಿ ಹಾಕಿರುವುದು ನನ್ನ ಫೋಟೋ ಅಲ್ಲ. ನನಗೆ ಶೂ ಲೇಸ್ ತೊಡಲು ಬರುವುದಿಲ್ಲ ಎಂದು ತಿಳಿಸಲು ಆ ಚಿತ್ರ ಹಾಕಿದ್ದೆ ಅಷ್ಟೆ. ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ, ಸಾರಿ ಕ್ಷಮಿಸಿ " ಎಂದಿದ್ದಾರೆ. ಆದರೆ ಅಷ್ಟೊತ್ತಿಗಾಗಲೆ ಈ ಸುದ್ದಿ ಊರ ತುಂಬ ಟಾಂ ಟಾಂ ಆಗಿತ್ತು. ತಾನು ಮಾಡಿದ ಸ್ವಯಂಕೃತಾಪರಾಧಕ್ಕೆ ಬಿಪಾಶಾ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

More from Filmibeat

English summary
Bollywood actress Bipasha Basu landed in big trouble. she posted a picture of two children tying her shoelaces and tweeted. This leads a big trouble and people started accusing the actor of child labour. Later she justified that "Well the ppl helping me in the pix r my friend n sister, Who I help often with the same! So am sorry if it hurt anyones sentiments! (sic)".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X