ಐಶ್ವರ್ಯ ರೈ ಬೇಬಿ ಪೋಟೋಗೆ 10 ಲಕ್ಷ ರು. ಬಹುಮಾನ

ಐಶ್ವರ್ಯ ರೈ ಬಚ್ಚನ್ ಹೆಣ್ಣು ಮಗುವಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಭಾರತದಲ್ಲಂತೂ ಈ ಬೇಬಿ ಸದಾ ಸುದ್ದಿಯ ಕೇಂದ್ರಬಿಂದು. ಇದೀಗ ಸಾಗರದಾಚೆಯೂ ಮಗುವಿನ ಮಹಾತ್ಮೆ ಹಬ್ಬಿದೆ. ಕಾರಣ, ಅಮೆರಿಕಾದ ಪತ್ರಿಕೆಯೊಂದು ಮಗುವಿನ ಜನನದ ತಕ್ಷಣದ ಫೋಟೋಕ್ಕೆ 10 ರಿಂದ 15 ಲಕ್ಷ ರು. ಕೊಡಲು ಮುಂದೆ ಬಂದಿದೆ.

ಡೇಲಿ ಭಾಸ್ಕರ್ ಪತ್ರಿಕೆಗೆ ಈ ಕುರಿತು ಬಂದಿರುವ ವರದಿಯ ಪ್ರಕಾರ, ಅಮೇರಿಕಾದ ಪಬ್ಲಿಕೇಶನ್ಸ್ ಐಶೂ ಮಗುವಿನ ಫೋಟೋ ಪ್ರಕಟಣೆಗೆ ಮುಂದಾಗಿದ್ದು ಅದಕ್ಕಾಗಿ ರು. 10 ರಿಂದ 15 ಲಕ್ಷ ಕೊಡಲು ಒಪ್ಪಿಕೊಂಡಿದೆ. ಆಗತಾನೇ ಜನಿಸಿದ ಮಗುವಿನ ತಾಜಾತಾಜಾ ಫೋಟೋ ಬೇಕಾಗಿದೆ. ಫೋಟೋ ಕ್ವಾಲಿಟಿಯ ಮೇಲೆ ಹಣ ಕೊಡುವುದಾಗಿಯೂ ಅದು ತಿಳಿಸಿದೆ.

ಅಮಿತಾಬ್ ಮೊಮ್ಮಗಳ ಫೋಟೋಕ್ಕಾಗಿ ಪ್ರತಿಷ್ಠಿತ 'ನ್ಯಾಷನಲ್ ಎನ್ ಕ್ವಾಯ್ರರ್' ಟ್ಯಾಬ್ಲಾಯ್ಡ್ ಪತ್ರಿಕೆ ಕೂಡ ಕಾಯುತ್ತಿದ್ದು, ಅಮ್ಮ ಐಶ್ವರ್ಯ ರೈ ಅವರಂತೆಯೇ ಮಗಳೂ ಕೂಡ ಪ್ರಪಂಚದ ಸುದ್ದಿಯ ಕೇಂದ್ರಬಿಂಧುವಾಗಿದೆ. ಇದೀಗ ಜಗತ್ತಿನಾದ್ಯಂತ ಇರುವ ಫೋಟೋಗ್ರಾಫರ್ ಗಳಿಗೆ ಇದೊಂದು ಸವಾಲಾಗಿದೆ. ಯಾರು ಪೋಟೋ ಕೊಟ್ಟು ಬಹುಮಾನ ಗೆಲ್ಲುತ್ತಾರೋ, ಕಾದು ನೋಡಬೇಕಾಗಿದೆ. (ಏಜೆನ್ಸೀಸ್)

More from Filmibeat

English summary
Aishwarya Rai Bachchan baby girl worths 10 lakhs in global media after The American Publication are willing to pay the photographer anywhere between Rs 10 lakh to 15 lakh for the Bachchan baby first pictures.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X