ರಜಿನಿ ಅಳಿಯನ ಹಾಡಿಗೆ ತಲೆ ಕುಣಿಸಿದ ಬಿಗ್ ಬಿ

By Mahesh

ರಜನಿ ಕಾಂತ್ ಅಳಿಯ ಧನುಷ್ ಅರೆಬರೆ ಭಾಷೆಯಲ್ಲಿ ಬರೆದು ಹಾಡಿರುವ ಹೊಚ್ಚ ಹೊಸ ಹಾಡು ಭರ್ಜರಿ ಹಿಟ್ ಆಗಿದೆ. ಗೂಗಲ್ ಟ್ರೆಂಡ್ ನಲ್ಲಂತೂ ಟಾಪ್ 10 ನಿಂದ ಕೆಳಗಿಳಿದಿಲ್ಲ. ಅತಿ ಹೆಚ್ಚು ಸರ್ಚ್ ಮಾಡಿದ ಕೀ ಪದಗಳಲ್ಲಿ 'ಧನುಷ್' ಕೂಡಾ ಒಂದಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಧನುಷ್ ಹಾಡು ಕೇಳಿದ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಹುಚ್ಚೆದ್ದು ಕುಣಿಯುವುದೊಂದೇ ಬಾಕಿ. ರಜನಿಕಾಂತ್ ಮಗಳು ಐಶ್ವರ್ಯಾ ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರ '3' ರಲ್ಲಿ ಧನುಷ್ ಹಾಡಿರುವ ಹಾಡಿನ ತುಣುಕು ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡಿದ್ದೇ ತಡ ಭರ್ಜರಿ ಲಿಂಕ್ಸ್ ಸಿಕ್ಕಿದೆ.

ಮನೆಗೆ ಹೊಸ ಮೊಮ್ಮಗು ಬಂದ ಸಂತಸದಲ್ಲಿರುವ ಬಿಗ್ ಬಿಗೆ ಧನುಷ್ ಹಾಡು ಯಾರು ಕೇಳಿಸಿದರೂ ಗೊತ್ತಿಲ್ಲ. ಆದರೆ, 'why this Kolaveri Kolaveri Di' ಹಾಡು ಕೇಳಿದ ನಂತರ

"Just heard 'Kolaveri di' after much talk on it ... its so original and catchy ..congrats Dhanush and Aishwarya (Rajini's daughter) .. love." ಎಂದು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಬಿಗ್ ಬಿ ಟ್ವೀಟ್ ನೋಡಿ ಥ್ರಿಲ್ ಆದ ವೆಂಕಟೇಶ್ ಪ್ರಭು ಕಸ್ತೂರಿ ರಾಜಾ ಅಲಿಯಾಸ್ ಧನುಷ್,

"Its a great honour to get a tweet from Big B, very kind of him. I dedicate the tweet to all you guys who made kolaveri this big. Love you guys. God bless."
ಎಂದು ಟ್ವೀಟ್ಟಿಸಿ ಧನ್ಯವಾದ ಅರ್ಪಿಸಿದ್ದಾರೆ.

ತಮಿಳರ ಅಭಿಮಾನಕ್ಕೆ ಜೈ: Tanglish (Tamil-English)ನಲ್ಲಿರುವ ಹಾಡು ಸರಳವಾಗಿದ್ದು, ಅನಿರುದ್ಧ್ ಅವರ ಸಂಗೀತವಿರುವ ಈ ಗೀತೆ ಸಮಾಜಿಕ ಜಾಲ ತಾಣಗಳು, ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡಿದ್ದು ನ.16ರಂದು. ಇಲ್ಲಿಯವರೆಗೂ ಸುಮಾರು 14ಲಕ್ಷಕ್ಕೂ ಅಧಿಕ ಹಿಟ್ಸ್ ಈ ಹಾಡಿಗೆ ಸಿಕ್ಕಿದೆ. ಈಗ ಬಾಲಿವುಡ್ ನ ಗಮನ ಕೂಡಾ ಸೆಳೆದಿದೆ.

ನಮ್ಮಲ್ಲೂ ಉತ್ತಮ ಹಾಡುಗಳು ಬರುತ್ತವೆ ಆದರೆ, ಕೆಲವು ಮಾತ್ರ ಯುಟ್ಯೂಬ್ ನಲ್ಲಿ ದಾಖಲೆ ಬರೆದಿವೆ. ಉಳಿದವು ಸಿನಿಮಾ ಬಂದು ಹೋದರೂ ಅಭಿಮಾನಿಗಳನ್ನು ತಲುಪಿರುವುದಿಲ್ಲ. ನಮ್ಮ ನಿರ್ಮಾಪಕರುಗಳು ಕೂಡಾ ಯ್ಯೂಟ್ಯೂಬ್ ಸೇರಿದಂತೆ ಸಮಾಜಿಕ ಜಾಲ ತಾಣದಲ್ಲಿ ವಿಡಿಯೋ ತುಣುಕು ಹಾಕಿ ಕ್ರೇಜ್ ಹುಟ್ಟುಹಾಕುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.

More from Filmibeat

English summary
Megastar Amitabh Bachchan is the latest celebrity to be smitten by the foot-tapping music and the crazy lyrics of 'Kolaveri Di', which has been sung and penned by Tamil movie star Dhanush. Big B congratulated the Tamil actor on the song, which is from the upcoming Tamil movie 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X