ಇಂಗ್ಲೆಂಡ್ ವೈದ್ಯನೊಂದಿಗೆ ಕಂಗನಾ ಕಣ್ಣಾಮುಚ್ಚಾಲೆ
ಗ್ಯಾಂಗ್‌ಸ್ಟರ್ ಹಾಗೂ ಫ್ಯಾಷನ್ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತನ್ನದೇ ಬೌಂಡರಿ ಲೌನ್ ಎಳೆದುಕೊಂಡ ಕಂಗನಾ ರನೌತ್ ಈಗ ಮತ್ತೊಬ್ಬ ಪ್ರೇಮಿಗೆ ಮನಸು, ಹೃದಯ ಕೊಟ್ಟಿದ್ದಾರೆ. ವೃತ್ತಿಯಲ್ಲಿ ವೈದ್ಯನಾದ ಈತನೊಂದಿಗೆ ಕಂಗನಾ ಕಳೆದ ಒಂದು ವರ್ಷದಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದಾರಂತೆ.
ಅಯ್ಯೋ ಏನು ಹೇಳೋಣ ತಮ್ಮ ಭಾವಿ ಪತಿಯ ಬಗ್ಗೆ, ಆ ವಿಷಯದಲ್ಲಿ ಸಿಕ್ಕಾಪಟ್ಟೆ ಸ್ಪೀಡು, ರೊಮ್ಯಾಂಟಿಕ್ ಮನುಷ್ಯ ಎಂದಿದ್ದಾರೆ. ಇಷ್ಟಕ್ಕೂ ತಾವಿಬ್ಬರೂ ಏಕಾಂತದಲ್ಲಿ ಕೂತು ಏನು ಮಾತನಾಡಿದ್ದೀರಾ ಸ್ವಲ್ಪ ಹೇಳ್ತೀರಾ ಎಂದು ಕೇಳಿದ್ದಕ್ಕೆ ಆಕೆ ಹೇಳಿದ್ದೇನೆಂದರೆ...
ತಳಿವಿಜ್ಞಾನ, ಅನುವಂಶಿಕತೆ ಅದೂ ಇದೂ ಎಂದು ಮಾತನಾಡಿದ್ದೇವೆ. ಹಾಂ ಮರೆತೆ, ಅನುವಂಶಿಕವಾಗಿ ಬರುವ ಕ್ಯಾನ್ಸರ್ ಬಗ್ಗೆ ಅವರು ಬಹಳ ಸೊಗಸಾಗಿ ವಿವರಿಸಿದರು ಎಂದು ಹೇಳಿ ನಾಚಿಕೊಳ್ಳುತ್ತಾರೆ ಕಂಗನಾ. (ಏಜೆನ್ಸೀಸ್)
More from Filmibeat
English summary
Kangana Ranaut, who is in the news for all the wrong reasons revealed recently that she has found a new boyfriend – And that too a phirang doctor!


Click it and Unblock the Notifications











