ಸೈಫ್ ಜೊತೆ ಸದ್ಯಕ್ಕೆ ಮದುವೆ ಇಲ್ಲ ಎಂದ ಕರೀನಾ!

By Rajendra

ಮೊನ್ನೆ ಮೊನ್ನೆ ಬಾಲಿವುಡ್ ನವಾಬ್ ಸೈಫ್ ಆಲಿ ಖಾನ್ ತಮ್ಮ ಮದುವೆ ದಿನಾಂಕವನ್ನು ಪ್ರಕಟಿಸಿದ್ದರು. 2012ರ ಮಾರ್ಚ್ ತಿಂಗಳಲ್ಲಿ ಕರೀನಾ ಕಪೂರ್ ಕೈಹಿಡಿಯುವುದಾಗಿ ಸೈಫ್ ಘೋಷಿಸಿದ್ದರು. ಆದರೆ ಕರೀನಾ ಕಪೂರ್ ಮಾತ್ರ ಸದ್ಯಕ್ಕಂತೂ ನಮ್ಮ ಮದುವೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿದಿನ ನನ್ನ ಮದುವೆ ಬಗ್ಗೆ ಬರುತ್ತಿರುವ ಸುದ್ದಿಗಳು ನನ್ನನ್ನು ಆತಂಕಕ್ಕೀಡು ಮಾಡುತ್ತಿವೆ. ಮದುವೆ ಮುಹೂರ್ತ ನನಗೇ ಗೊತ್ತಿಲ್ಲದಂತೆ ಯಾರೋ ಪ್ರಕಟಿಸುತ್ತಿದ್ದಾರೆ. ಮದುವೆ ವಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಿರುವ ಬಗ್ಗೆ ಹನಿಮೂನ್ ಪ್ಲಾನ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಇವೆಲ್ಲಾ ಕೇವಲ ವದಂತಿಗಳಷ್ಟೆ. ಏಕೆಂದರೆ ನಾನು ಈಗಲೇ ಮದುವೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಸೈಫ್ ನಾನು ನಮ್ಮ ಜೀವನವನ್ನು ಹಾಯಾಗಿ ಕಳೆಯುತ್ತಿದ್ದೇವೆ. ನಮ್ಮಿಬ್ಬರ ನಡುವೆ ಬೇಕಾದಷ್ಟು ಪ್ರೇಮವಿದೆ. ಇಬ್ಬರು ಸಂತೋಷವಾಗಿದ್ದೇವೆ. ಒಬ್ಬರಿಗೊಬ್ಬರು ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮಿಬ್ಬರ ನಡುವೆ ಇನ್ನೂ ಮದುವೆ ವಿಷಯ ಪ್ರಸ್ತಾಪವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೈಫ್ ಜೊತೆ 'ಏಜೆಂಟ್ ವಿನೋದ್' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನನ್ನ ಮಟ್ಟಿಗೆ ಇದು ವಿಶೇಷ ಚಿತ್ರ. ಈ ಚಿತ್ರ ಖಂಡಿತ ಜಯಭೇರಿ ಬಾರಿಸುತ್ತದೆ ಎಂಬ ನಂಬಿಕೆ ಇದೆ. ನಾವಿಬ್ಬರೂ ಕಷ್ಟಪಟ್ಟು ಕೆಲಸ ಮಾಡುತ್ತಿರುವುದಾಗಿ ಕರೀನಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

More from Filmibeat

English summary
Actress Kareena Kapoor clarifies about her marriage with Saif. She says Saif and I are happily in love and happy with each other; We are taking our time. And I assure you, nothing - absolutely nothing - is fixed as yet: no marriage date, no marriage dress, nothing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X