For Quick Alerts
  ALLOW NOTIFICATIONS  
  For Daily Alerts

  ಬಾರಿನಲ್ಲಿ ಭಾರೀ ಚಕಮಕಿಗೆ ಕಾರಣವಾದ ಚಿಕ್ನಿ ಚಮೇಲಿ

  |

  ಬಾಲಿವುಡ್ ನ ಸದ್ಯದ ಸೆನ್ಸೇಷನಲ್ ಹಾಡೊಂದು ಬಾರಿನಲ್ಲಿ ಭಾರೀ ಗುಂಡಿನ ಮಳೆ ಹಾಗೂ ಭಾರೀ ಅನಾಹುತಕ್ಕೆ ಕಾರಣವಾಗಿದೆ. ಇಲ್ಲಿಯವರೆಗೆ ಹಾಡೊಂದು ಜಗಳ, ಗುಂಡಿನ ಮಳೆಗೆ ಕಾರಣವಾದ ಘಟನೆ ನೀವು ಓದಿದ್ದೀರಾ? ಇಲ್ಲಿದೆ ಓದಿ.... ಬಾರಿನಲ್ಲಿ ಗಲಾಟೆಗೆ ಕಾರಣವಾದ ಈ ಹಾಡು ಕತ್ರಿನಾ ಕೈಫ್ ಕುಣಿದಿರುವ, ಅಗ್ನಿಪತ್ ಚಿತ್ರದ ಸೆನ್ಸೇಷನಲ್ ಹಾಡು ಚಿಕ್ನಿ ಚಮೇಲಿ.

  ಆಗಿದ್ದಿಷ್ಟು. ದಹಿಸರ್ ಎಂಬ ಸ್ಥಳವೊಂದರ ಬಾರ್ ನಲ್ಲಿ ಒಬ್ಬ ವ್ಯಕ್ತಿ ಹಾಗೂ ಗುಂಪಿನ ನಡುವೆ ಭಾರೀ ಚಕಮಕಿ ನಡೆದುಹೋಗಿದೆ. ಕಾರಣ ಈಗಾಗಲೇ ಸಾಕಷ್ಟು ಬಾರಿ ಹಾಡಿ ಕುಣಿದಿದ್ದ ಅಗ್ನಿಪತ್ ಚಿತ್ರದ 'ಚಿಕ್ನಿ ಚಮೇಲಿ....' ಹಾಡನ್ನು ಬಾರ್ ಸಿಂಗರ್ ಒಬ್ಬರಿಗೆ ಮತ್ತೆ ಹಾಡಲು ಹೇಳಲಾಯಿತು.

  ಆದರೆ ಈ ಮೊದಲು ಸಾಕಷ್ಟು ಬಾರಿ ಆಕೆಯ ಅದೇ ಹಾಡನ್ನು ನೋಡಿದ್ದ ಅನೇಕ ಗ್ರಾಹಕರು ಬದಲಾವಣೆ ಬಯಸಿ ಆ ಹಾಡಿಗೆ ವಿರೋಧ ವ್ಯಕ್ತಪಡಿಸಿದರು. ಅದೇ ವಿವಾದಕ್ಕೆ ಕಾರಣವಾಗಿ ನಂತರ ಬೈಗುಳಗಳಿಗೆ ತಿರುಗಿದ ಘಟನೆ ಕೊನೆಯಲ್ಲಿ ಗನ್ ನಿಂದ ಶೂಟ್ ಕಾಳಗ ನಡೆಯಲು ಕಾರಣವಾಯ್ತು. ಒಟ್ಟಿನಲ್ಲಿ ಕತ್ರಿನಾ ಬೆಂಕಿ ಬಾರ್ ವರೆಗೂ ಬಂದಿದೆ, ಗನ್ ಒಳಗೂ ಕುಳಿತಿದೆ. (ಏಜೆನ್ಸೀಸ್)

  English summary
  Katrina Kaif Chikni Chameli song from the film Agneepath led to bloodshed and violence in a bar near Dahisar Mumbai.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X