ಕೂಸು ಹುಟ್ಟಿದ ಮೂರೇ ದಿನಕ್ಕೆ ಹೆಸರಿಟ್ಟ ಲಾರಾ ದತ್ತ
ಬಾಲಿವುಡ್ ತಾರೆ ಐಶ್ವರ್ಯ ರೈ ಹಾಗೂ ಅವರ ಕುಟುಂಬಿಕರು ತಮ್ಮ ಮಗಳಿಗೆ ಏನು ಹೆಸರಿಡಬೇಕೆಂದು ಇನ್ನೂ ತಲೆಕೆಡಿಸಿಕೊಳ್ಳುತ್ತಾ ಕೂತಿದ್ದಾರೆ. ಆದರೆ ತಾರೆ ಲಾರಾ ದತ್ತ ಹಾಗೂ ಮಹೇಶ್ ಭೂಪತಿ ದಂಪತಿಗಳು ಮೂರೇ ದಿನಕ್ಕೆ ತಮ್ಮ ಹೆಣ್ಣು ಮಗುವಿಗೆ ನಾಮಕರಣ ಶಾಸ್ತ್ರ ಮಾಡಿ ಮುಗಿಸಿದ್ದಾರೆ.
ಜನವರಿ 20, 2012ರಂದು ಲಾರಾ ದತ್ತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಅವರು ನಾಮಕರಣ ಮಾಡಲು ಹೆಚ್ಚು ಸಮಯ ಹಾಳು ಮಾಡದೆ ಮೂರೇ ದಿನಕ್ಕೆ ಹೆಸರಿಟ್ಟಿದ್ದಾರೆ. ಮಗುವಿನ ಹೆಸರು ಸಾಯಿರಾ ಭೂಪತಿ (Saira). ತಮ್ಮ ಮಗಳಿಗೆ ಹೆಸರಿಟ್ಟ ಸುದ್ದಿಯನ್ನು ಭೂಪತಿ ಟ್ವೀಟಿಸಿದ್ದಾರೆ.
ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ತಂದೆ "Welcoming Saira Bhupathi in this world." ಎಂದು ಟ್ವೀಟಿಸಿ ಸ್ವಾಗತಿಸಿದ್ದಾರೆ. ಕೂಸು ಹುಟ್ಟುವುದಕ್ಕಿಂತಲೂ ಮೊದಲೇ ಕುಲಾವಿ ಹೊಲಿಸಿದರು ಎಂಬಂತೆ ಇವರೂ ಹೆಸರನ್ನೂ ಸಿದ್ಧವಾಗಿಟ್ಟುಕೊಂಡಿದ್ದರೋ ಏನೋ! (ಏಜೆನ್ಸೀಸ್)
More from Filmibeat
English summary
Proud parents Lara Dutta and Mahesh Bhupathi name their newborn who arrived on this earth on January 20, 2012. Without delaying like the Bachchans, Mahesh and Lara named their baby girl Saira.
ಲಾರಾ ದತ್ತ ಗರ್ಭಿಣಿ ಮಹೇಶ್ ಭೂಪತಿ ಐಶ್ವರ್ಯ ರೈ ಮಗು ಶಿಲ್ಪಾ ಶೆಟ್ಟಿ ಬಾಲಿವುಡ್ lara dutta pregnant aishwarya rai shilpa shetty bollywood mahesh bhupathi


Click it and Unblock the Notifications











