For Quick Alerts
  ALLOW NOTIFICATIONS  
  For Daily Alerts

  ಪಾಕ್ ಮಾದಕ ಬೆಡಗಿ ವೀಣಾ ಕೊನೆಗೂ ಬಾಲಿವುಡ್ ಎಂಟ್ರಿ

  By Mahesh
  |

  ಪಾಕಿಸ್ತಾನಿ ನಟಿ ವೀಣಾ ಮಲಿಕ್ ಬಿಗ್ ಬಾಸ್ ಮೂಲಕ ಬಾಲಿವುಡ್ ಎಂಟ್ರಿಗೆ ರಹದಾರಿ ಪಡೆದುಕೊಂಡರೂ ಯಾಕೋ ಕಾಲ ಕೂಡಿ ಬಂದಿರಲಿಲ್ಲ. ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಆಕರ್ಷಕವಾಗಿ ಓಡಾಡುತ್ತಾ ಸಂಚಲನ ಮೂಡಿಸಿದ್ದ ವೀಣಾ ಹಾಗೂ ಹೀಗೂ ಮಾಡಿ ಫಿಲ್ಮಂ ಚಾನ್ಸ್ ಗಿಟ್ಟಿಸಿಕೊಂಡಿದ್ದಾಳೆ.

  ಪಾಕ್‌ನ ಕೆಲ ಕ್ರಿಕೆಟ್ಟಿಗರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದ ಈಕೆ ಬಾಲಿವುಡ್ಡಿ ಮಂದಿಯೊಂದಿಗೆ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಬಿಗ್ ಬಾಸ್ 4 ಎಂಬ ರಿಯಾಲಿಟಿ ಶೋನಲ್ಲಿ ಈಕೆ ಭಾಗವಹಿಸಿ ತನ್ನ ದೇಹ ಸಿರಿಯನ್ನು ಮಾದಕವಾಗಿ ಪ್ರದರ್ಶಿಸಿದ್ದಳು. ಅಮೀಷಾ ಪಟೇಲ್ ಸೋದರ ಅಶ್ಮಿತ್ ಪಟೇಲ್‌ನೊಂದಿಗೆ ಹಸಿಬಿಸಿಯಾಗಿ ಕಾಣಿಸಿ ಕೊಂಡಿದ್ದ ಈಕೆ ವಿರುದ್ಧ ಪಾಕಿಸ್ತಾನದ ಧಾರ್ಮಿಕ ಮುಖಂಡರು ಕಿಡಿ ಕಾರಿದ್ದೂ ಆಗಿತ್ತು.

  ಇದೀಗ ನಟ, ನಿರ್ದೆಶಕ ಆನಂದ್ ಬಾಲರಾಜ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ಲೋ ಬಜೆಟ್ ಚಿತ್ರದಾಲ್ ಮೇ ಕುಚ್ ಕಾಲಾ ಹೇ' ಯಲ್ಲಿ ನಟಿಸಲು ಈಕೆ ಅವಕಾಶ ಪಡೆದುಕೊಂಡಿದ್ದಾಳೆ. ನಿರ್ದೇಶಕ ಆನಂದ್ ಬಾಲರಾಜ್ ಈ ಹಿಂದೆ ರಾಮ್‌ಲಖನ್, ಖಳ್ ನಾಯಕ್, ಸೌಧಾಗರ್, ಪರ್ದೇಸ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

  ಆನಂದ್ ಬಾಲರಾಜ್ ಪ್ರಸಿದ್ಧ ನಿರ್ದೇಶಕರಾಗಿರುವ ದೀಪಕ್ ಬಾಲರಾಜ್ ಅವರ ಸಹೋದರ. ಕಿರಿಕ್ ರಾಣಿ ವೀಣಾ ಕಟ್ಟಿಕೊಂಡು ಹಿರಿನಟ ಆನಂದ್ ಹೇಗೆ ಹೆಣಗುತ್ತಾರೋ ಎಂದು ಬಾಲಿವುಡ್ ಮಂದಿ ಮುಸಿಮುಸಿ ನಗುತ್ತಿದ್ದಾರೆ. ವೀಣಾ ಮೈಮಾಟ ಪ್ರದರ್ಶನಕ್ಕೆ ದೊಡ್ಡ ವೇದಿಕೆ ಸಿಕ್ಕಿದೆ ಎಂದು ಪಡ್ಡೆಗಳು ಕಾತುರದಿಂದ ಕಾದಿದ್ದಾರೆ.

  English summary
  Big Boss Controversial Pakistan actress Veena Malik has finally making her debut in Bollywood film. After the Big Boss success she was criticized by Pakistanis for her link up with Asmit Patel and types of attire she was wearing in the reality show. Nevertheless She bagged a role in Daal Mein Kuch Kaala Hai a low budget movie directed by Anand Balraj

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X