ಪೀಪಲ್ ಮ್ಯಾಗಜಿನ್‌ನಲ್ಲಿ ಗರ್ಭಿಣಿ ಮಂದಿರಾ ಬೇಡಿ
ಮದುವೆಯಾದ ಹನ್ನೆರಡು ವರ್ಷಗಳ ಬಳಿಕ ತಾಯಿಯ ಸೌಭಾಗ್ಯ ಕಾಣುತ್ತಿದ್ದಾರೆ ನಟಿ ಮಂದಿರಾ ಬೇಡಿ. ಇನ್ನೊಂದು ತಿಂಗಳಲ್ಲಿ ರಾಜ್ ಕುಶಾಲ್ ಮತ್ತು ಮಂದಿರಾ ಮನೆಗೆ ಹೊಸ ಸದಸ್ಯನ ಆಗಮನವಾಗಲಿದೆ.
ಇತ್ತೀಚೆಗಿನ 'ಪೀಪಲ್' ಮ್ಯಾಗಜಿನ್ ಸಂಚಿಕೆಗೆ ಮಂದಿರಾ ಮುಖಾಮುಖಿಯಾಗಿದ್ದಾರೆ. ಮುಖಪುಟಕ್ಕೆ ನಗುಮುಖದ ದರ್ಶನ ನೀಡಿರುವ ಆಕೆಯ ಮುಖದಲ್ಲಿ ತಾಯ್ತನದ ಸಂಭ್ರಮ ಎದ್ದು ಕಾಣುತ್ತಿದೆ.
ಈ ವಿಶೇಷ ಸಂಚಿಕೆಯಲ್ಲಿ, ಮಂದಿರಾ ತಮ್ಮ ಮನದಾಳದ ಮಾತುಗಳನ್ನು ಹೊರಗೆ ಹಾಕಿದ್ದಾರೆ. ತಾಯ್ತನದ ಬಗ್ಗೆ ಮಾತನಾಡಿರುವ ಆಕೆ, "ಇದೊಂದು ವರ್ಣಿಸಲಾಗದಂತಹ ಸಂಭ್ರಮ. ತಾಯ್ತನವನ್ನು ಪ್ರತಿಯೊಬ್ಬ ಮಹಿಳೆಯೂ ಅನುಭವಿಸಿಯೇ ತೀರಬೇಕು" ಎಂದಿದ್ದಾರೆ.
ರಾಜ್ ಕುಶಾಲ್ ಅವರನ್ನು ಮದುವೆಯಾದ ಬಳಿಕ ಸುದೀರ್ಘ ಸಮಯ ಕಾದರೂ ಮಂದಿರಾ ಬೇಡಿಗೆ ಸಂತಾನ ಭಾಗ್ಯ ಸಿಕ್ಕಿರಲಿಲ್ಲ. ಈಗ ಆಕೆ ತುಂಬು ಗರ್ಭಿಣಿ. ಈಕೆ ಗರ್ಭಿಣಿ ಎಂಬ ವಿಷಯ ಕೆಲ ತಿಂಗಳ ಹಿಂದೆಯೇ ಲೋಪಾರ್ಪಣೆಗೊಂಡಿತ್ತು. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Pregnant Mandira Bedi posed for the latest issue of PEOPLE magazine. Mandira Bedi is experiencing the feeling of motherhood. Her delivery date is due next month and the new parents Raj and Mandira are thrilled to welcome the new member in their life.


Click it and Unblock the Notifications











