ರವಿ ಪೂಜಾರಿಯಿಂದ ನಟ ವಿವೇಕ್‌ಗೆ 'ಮಾಮೂಲಿ' ಕರೆ

By Rajendra

ಭೂಗತ ಪಾತಕಿಗಳು ಸಿನಿಮಾ ತಾರೆಗಳಿಗೆ ಕರೆ ಮಾಡಿ ಮಾಮೂಲಿ ಕೊಡುವಂತೆ ಬೆದರಿಕೆ ಒಡ್ಡುವುದು ಹಫ್ತಾ ವಸೂಲಿ ಮಾಡುವುದು ಸಾಮಾನ್ಯ. ಕೆಲವು ತಾರೆಗಳಂತೂ ಮಾಮೂಲಿಯನ್ನು ಭೂಗತ ಡಾನ್‌ಗಳ ಮನೆಬಾಗಿಲಿಗೇ ತಲುಪಿಸಿ ಕೃತಾರ್ಥರಾಗುತ್ತಾರೆ. ಆದರೆ ನಟ ವಿವೇಕ್ ಒಬೇರಾಯ್ ಫೋನ್ ಕೆಳಗಡೆ ಮಡಗೋ ಲೋ ಎಂದು ಭೂಗತ ಪಾತಕಿ ರವಿ ಪೂಜಾರಿಗೆ ಧಮಕಿ ಹಾಕಿದ್ದಾರೆ!

ರು.5 ಕೋಟಿ ಹಫ್ತಾ ಕೊಡುವಂತೆ ಭೂಗತ ಪಾತಕಿ ರವಿ ಪೂಜಾರಿ ತಮಗೆ ಕರೆ ಮಾಡಿದ್ದಾನೆ ಎಂದು ಪೊಲೀಸರಿಗೆ ಕಂಪ್ಲೇಂಟ್ ಕೂಡ ಕೊಟ್ಟಿದ್ದಾರೆ. ಹಣ ನೀಡದಿದ್ದರೆ ನೋಡ್ಕೋತೀನಿ ಎಂಬ ಬೆದರಿಕೆಯೂ ರವಿ ಪೂಜಾರಿಯಿಂದ ಬಂದಿದೆ ಎಂಬುದು ವಿವೇಕವಾಣಿ.

ಈ ಹಿಂದೆ ನಿರ್ದೇಶಕ ಮಹೇಶ್ ಭಟ್ ಸೇರಿದಂತೆ ಸಂಪ್ಭರಿತ ಬಿಲ್ಡರ್‌ ಕುಳಗಳಿಗೂ ರವಿ ಪೂಜಾರಿ ಕಡೆಯಿಂದ 'ಮಾಮೂಲಿ' ಕರೆ ಬಂದಿತ್ತು. ಇವರೆಲ್ಲಾ ಮುಂಬೈ ಪೊಲೀಸರಿಗೆ ದೂರು ಸಹ ನೀಡಿದ್ದಾರೆ. ಮತ್ತೊಬ್ಬ ಭೂಗತ ಪಾತಕಿ ಚೋಟಾ ರಾಜನ್‌ನ ಬಲಗೈ ಬಂಟನಾಗಿದ್ದ ರವಿ ಪೂಜಾರಿ ಆ ಗ್ಯಾಂಗ್‌ನಿಂದ ಬೇರ್ಪಟ್ಟು ತನ್ನದೇ ಆದಂತಹ ಭೂಗತ ಸಾಮ್ರಾಜ್ಯವನ್ನು ಕಟ್ಟಿ ಮುನ್ನೆಡೆಸುತ್ತಿದ್ದಾನೆ. (ಏಜೆನ್ಸೀಸ್)

More from Filmibeat

English summary
Bollywood actor Vivek Oberoi has reportedly lodged a complaint with the Mumbai police stating that he has received an extortion call from underworld gangster Ravi Pujari. Ravi Pujari has apparently demanded five crores from Vivek.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X