ಮೂರನೇ ಮಗುವಿನ ನಿರೀಕ್ಷೆಯಲ್ಲಿ ಶಿಲ್ಪಾ ಶೆಟ್ಟಿ!
ಸಾಗರಕನ್ಯೆ ಶಿಲ್ಪಾ ಶೆಟ್ಟಿ ಮೂರನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ! ಅಯ್ಯೋ ಶಿವನೇ ಅವರಿಗೆ ಇನ್ನೂ ಒಂದು ಮಗೂನೂ ಆಗಿಲ್ಲ, ಆಗಲೆ ಮೂರನೇ ಮಗುನಾ? ಎಂದು ಹುಬ್ಬೇರಿಸಬೇಡಿ. ಶಿಲ್ಪಾ ಶೆಟ್ಟಿ ಮಾತುಗಳಲ್ಲೇ ಕೇಳಿ ಅವರ ಮುದ್ದಿನ ಮೂರನೆ ಮಗು ಸಂಗತೀನಾ!
"ನಾನು ಪ್ರೆಗ್ನೆಂಟ್ ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅದು ನಿಜವಲ್ಲ. ಸದ್ಯಕ್ಕೆ ನಾವಿನ್ನೂ ಮಗು ಬಗ್ಗೆ ಯೋಚಿಸಿಲ್ಲ. ಶೀಘ್ರದಲ್ಲೆ ಈ ಬಗ್ಗೆ ರಾಜ್ ಕುಂದ್ರಾ ಹಾಗೂ ನಾನು ಪ್ಲಾನ್ ಮಾಡುತ್ತೇವೆ. ಸದ್ಯಕ್ಕೆ ನಾನು ಎರಡು ಮಕ್ಕಳ ನ್ನು ಸಂಭಾಳಿಸುವುದರಲ್ಲಿ ಬ್ಯುಸಿಯಾಗಿದ್ದೇನೆ" ಎಂದಿದ್ದಾರೆ.
ತನ್ನ ಸಾಕುನಾಯಿ ರಾಜ್ ಈಗಾಗಲೆ ಬೇಬಿಗೆ ಜನ್ಮ ನೀಡಿದೆ. ಇವೆರಡೂ ನನ್ನ ಮುದ್ದಿನ ಮಕ್ಕಳಿದ್ದಂತೆ. ಇವನ್ನು ಸಂಭಾಳಿಸುವುದೇ ದೊಡ್ಡ ಕೆಲಸವಾಗಿದೆ. ಇನ್ನು ಮೂರನೆ ಮಗು ಅಂದಿರಾ, ಶೀಘ್ರದಲ್ಲೆ ಆರಂಭವಾಗಲಿರುವ ತಮ್ಮ ನಿರ್ಮಾಣ ಸಂಸ್ಥೆ ಎಂದು ಕಿಲಕಿಲ ನಗುತ್ತಾರೆ ಶಿಲ್ಪಾ ಶೆಟ್ಟಿ. (ಏಜೆನ್ಸೀಸ್)
More from Filmibeat
English summary
Right now bollywood actress Shilpa Shetty is busy with he two babies and expecting third baby! Before the shock can register read further.


Click it and Unblock the Notifications











