ಸೆಕ್ಸ್ ವರ್ಕರ್ ಆಗಲಿದ್ದಾರೆ ನಟಿ ವೀಣಾ ಮಲಿಕ್
ಜಿಂದಗಿ 50-50 ನಲ್ಲಿ ಸಾಕಷ್ಟು ಬಿಂದಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಈ ಪಾಕಿಸ್ತಾನಿ ಮಲ್ಲಿಗೆ ವೀಣಾ. 'ಮಾಧುರಿ' ಎಂಬ ಸೆಕ್ಸ್ ವರ್ಕರ್ ಒಬ್ಬರ ನೈಜ ಜೀವನವನ್ನಾಧರಿಸಿದ ಕಥೆ ಇದರಲ್ಲಿದೆಯಂತೆ. ಆ ಮಾಧುರಿ, ಜೀವನ ನಡೆಸುವುದಕ್ಕಾಗಿ ಎರಡು ರೀತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ಅದರಲ್ಲೊಂದು ಸೆಕ್ಸ್ ವರ್ಕರ್. ಈ ಸಿನಿಮಾದ ಪಾತ್ರಕ್ಕಾಗಿ ಈ ನಟಿ ವೀಣಾ ಮಲಿಕ್ ಸೆಕ್ಸ್ ವರ್ಕರ್ ಆಗಲೇಬೇಕಾಗಿದೆ. ಇದು ಸುದ್ದಿ.
ಮಾಧುರಿ ಎದುರಿಸುತ್ತಿರುವ ಸಮಸ್ಯೆಗಳ ನೈಜ ಮುಖವನ್ನು ತಿಳಿಯುವುದಕ್ಕಾಗಿ ಮಾಧುರಿಯ ಜೊತೆ ಸಾಕಷ್ಟು ವೇಳೆ ಕಳೆಯುತ್ತಿರುವ ವೀಣಾ, "ಇದರಿಂದ ನಾನು ಸೆಕ್ಸ್ ವರ್ಕರ್ ಗಳನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ನಾನೂ ಕೂಡ ಐದು ಹೆಣ್ಣುಮಕ್ಕಳಿರುವ ಕುಟುಂಬದಿಂದ ಬಂದವಳು. ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಬದುಕು ಎಷ್ಟು ದುಸ್ತರ ಎಂಬ ಅರಿವಿದೆ" ಎಂದಿದ್ದಾರೆ.
ವೀಣಾ ಮಲಿಕ್ ಏನೋ ಪಾತ್ರವಾಗಲಿದ್ದಾರೆ. ಆದರೆ ಪ್ರೇಕ್ಷಕರಿಗೆ ನೋಡಲು ಸಿಗುವುದು ಅವರ ಡ್ಯೂಪೇನೂ ಅಲ್ಲ. ವೀಣಾ, ನೈಜ ಅಭಿನಯಕ್ಕಾಗಿ ತೋರಿಸಲಿರುವ ನೈಜ ದೇಹಸಿರಿಯನ್ನು ಸವಿಯಲು ಪಡ್ಡೆಗಳು ಕಾತರದಿಂದ ಕಾಯುತ್ತಿದ್ದಾರೆ. ವೀಣಾ ಆದಷ್ಟು ನೈಜವಾಗಿ ಅಭಿನಯಿಸಲು ಪ್ರಯತ್ನಸಲಿ ಎಂದು ಹರಕೆ ಹೊತ್ತಿದ್ದಾರೆ ಎಂಬ ಗುಟ್ಟು ರಟ್ಟಾಗಿದೆ.


Click it and Unblock the Notifications












